12 ಮಂದಿ ಪೊಲೀಸ್ ಇಲಾಖೆಗೆ ಆಯ್ಕೆ
ಮಂಗಳೂರು, ಫೆ.3: ನಗರ ಪೊಲೀಸ್ ಆಯುಕ್ತರ ಕಚೇರಿ ವತಿಯಿಂದ ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಆಯೋಜಿಸಲಾಗಿದ್ದ ಒಂದು ತಿಂಗಳ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ 12 ಮಂದಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದಾರೆ.
ಒಟ್ಟು 206 ಮಂದಿ ತರಬೇತಿ ಕಾರ್ಯಾಗಾರದ ಪ್ರಯೋಜನ ಪಡೆದಿದ್ದರು. ಈ ಪೈಕಿ ಒಬ್ಬರು ಎಸ್ಸೈ ಹಾಗು ಉಳಿದ ಮಂದಿ ಕಾನ್‌ಸ್ಟೇಬಲ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಬದ್ರುನ್ನೀಸಾ (ಎಸ್ಸೈ) ರಶ್ಮಿತಾ ಕಲ್ಮಾಡಿ, ಆಶಾ ಕುಟಿನ್ಹಾ, ಐಶ್ವರ್ಯ, ಚಂದ್ರಿಕಾ ಮಂಜುನಾಥ್, ಮಹಿಮಾ ಎಂ.ಎಸ್., ಪ್ರತೀಕ್ಷಾ ಎನ್.ಕೆ., ವನಿತಾ ಉನ್ಕಲ್, ಮಂಶಿರಾ ಬಾನು, ಪೂಜಾ ಶೆಟ್ಟಿಗಾರ್, ಸಂದೀಪ್ ರೈ, ಅಬ್ದುಲ್ ಖಾದರ್ (ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ) ಆಯ್ಕೆಯಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
Next Story