ಮಂಗಳೂರು : ಕರಿಮಣಿ, ಮೊಬೈಲ್ ಕಳವು ಪ್ರಕರಣ; ಆರೋಪಿ ಸೆರೆ

ಮಂಗಳೂರು, ಫೆ.3: ಮನೆಯೊಂದಕ್ಕೆ ನುಗ್ಗಿ ಕರಿಮಣಿ ಮತ್ತು ಮೊಬೈಲ್ ಕಳವುಗೈದಿದ್ದ ಆರೋಪಿಯನ್ನು ಸುರತ್ಕಲ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಂಧಿತನನ್ನು ಕಾಟಿಪಳ್ಳದ ಅಶ್ರಫ್ ಎಂದು ಗುರುತಿಸಲಾಗಿದೆ.
ಇಡ್ಯ ಗ್ರಾಮದ ಜನತಾ ಕಾಲನಿಯ ಸರಕಾರಿ ಶಾಲೆಯ ಬಳಿಯ ನಿವಾಸಿ ಸುನೀತಾ ಎಂಬವರು ಜ.17ರಂದು ಅಪರಾಹ್ನ 3ರಿಂದ 4:30ರ ಮಧ್ಯೆ ಹೊರಗೆ ಹೋಗಿದ್ದ ವೇಳೆ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಆರೋಪಿ 24 ಗ್ರಾಂ ತೂಕದ ಕರಿಮಣಿ ಸರ ಮತ್ತು ಮೊಬೈಲ್ ಕಳವು ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಅದರಂತೆ ಗುರುವಾರ ಸುರತ್ಕಲ್ ಪೊಲೀಸರು ಸೊತ್ತು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
Next Story