ಶಿವಾನಂದ ತಗಡೂರು ಅವರ `ಕೋವಿಡ್ ಕಥೆಗಳು' ಕೃತಿ ಫೆ.4ರಂದು ಲೋಕಾರ್ಪಣೆ

ಬೆಂಗಳೂರು, ಫೆ. 3: ಕೋವಿಡ್ ಸೋಂಕಿನ ದಾಳಿಯಿಂದಾಗಿ ನಲುಗಿದ ಪತ್ರಕರ್ತರ ಕುಟುಂಬದ ಕಣ್ಣೀರ ಕಥೆಯನ್ನು ಹೇಳುವ ಪತ್ರಕರ್ತ ಶಿವಾನಂದ ತಗಡೂರು ಅವರು ಹೇಳಿದ `ಕೋವಿಡ್ ಕಥೆಗಳು' ಕೃತಿಯ ಬಿಡುಗಡೆ ಕಾರ್ಯಕ್ರಮವನ್ನು ನಾಳೆ(ಫೆ.4) ಬೆಳಗ್ಗೆ 10:30ಕ್ಕೆ ಬೆಂಗಳೂರಿನ ಗಾಂಧಿ ಭವನದಲ್ಲಿ ಏರ್ಪಡಿಸಲಾಗಿದೆ.
ಕೃತಿಯನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು ಬಿಡುಗಡೆ ಮಾಡಲಿದ್ದು, ಪತ್ರಕರ್ತ ಕೆ.ಎನ್.ಚನ್ನೇಗೌಡ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದು, ಪತ್ರಕರ್ತರಾದ ರವಿ ಹೆಗಡೆ, ಹರಿಪ್ರಕಾಶ್ ಕೋಣೆಮನೆ, ವಿಶ್ವೇಶ್ವರ ಭಟ್, ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಸದಾಶಿವ ಶೆಣೈ, ಚಲನಚಿತ್ರ ಅಕಾಡೆಮಿ ಸದಸ್ಯೆ ಸೋನು ಗೌಡ, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಕೃಷ್ಣ, ವಾರ್ತಾ ಇಲಾಖೆ ವಿಶ್ರಾಂತ ಜಂಟಿ ನಿರ್ದೇಶಕ ಎಚ್.ಬಿ.ದಿನೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಬಹುರೂಪಿ ಪ್ರಕಟಣೆ ತಿಳಿಸಿದೆ.
Next Story





