ವಿದ್ಯಾರ್ಥಿನಿ ಆತ್ಮಹತ್ಯೆ
ಸುಳ್ಯ : ನ್ಯಾಯವಾದಿ ಗುತ್ತಿಗಾರಿನ ಪೂಜಾರಿಕೋಡಿ ಹರೀಶ್‍ರವರ ಪುತ್ರಿ ನಿಹಾರಿಕಾ (13) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಸುಬ್ರಹ್ಮಣ್ಯದ ಕುಮಾರಸ್ವಾಮಿ ಶಾಲೆಯ ವಿದ್ಯಾರ್ಥಿನಿಯಾಗಿದ್ದ ಈಕೆ ಈ ಬಾರಿ ನವೋದಯ ಶಾಲೆಗೆ ಏಳನೇ ತರಗತಿಗೆ ಆಯ್ಕೆಯಾಗಿದ್ದಳು. ಕೊರೋನ ಕಾರಣದಿಂದಾಗಿ ಶಾಲೆ ಆರಂಭಗೊಳ್ಳದೆ, ಮನೆಯಲ್ಲಿಯೇ ನವೋದಯದ ಆನ್‍ಲೈನ್ ತರಗತಿ ನಡೆಯುತ್ತಿತ್ತು. ಇನ್ನು ಒಂದೆರಡು ದಿನಗಳಲ್ಲಿ ನವೋದಯ ಶಾಲೆ ಪುನರಾರಂಭಗೊಳ್ಳಲಿತ್ತೆನ್ನಲಾಗಿದೆ.
ಗುರುವಾರ ಬೆಳಗ್ಗೆ ಹರೀಶ್ ಪೂಜಾರಿಕೋಡಿಯವರು ಮನೆಯಿಂದ ಹೊರಟು ಸುಳ್ಯದ ಕಡೆಗೆ ಬಂದ ಸ್ವಲ್ಪ ಹೊತ್ತಲ್ಲೇ ಬಾಲಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಳೆನ್ನಲಾಗಿದೆ. ಮನೆಯಲ್ಲಿದ್ದವರಿಗೆ ವಿಷಯ ಗೊತ್ತಾಗಿ ತಕ್ಷಣ ಹೋಗಿ ಹಗ್ಗದಿಂದ ಕೆಳಗಿಳಿಸಿ, ಗುತ್ತಿಗಾರಿಗೆ ಆಸ್ಪತ್ರೆಗೆ ಕರೆತಂದರು. ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಯಿತು. ಇಲ್ಲಿ ಬಂದು ತಲುಪಿದಾಗ ಆಕೆ ಕೊನೆಯುಸಿರೆಳೆದಿರು ವುದಾಗಿ ವೈದ್ಯರು ತಿಳಿಸಿದ್ದಾರೆ.
Next Story





