ಬಜ್ಪೆ: ಆತ್ಯಾಚಾರಕ್ಕೆ ಯತ್ನಿಸಿದ ಆರೋಪಿಯ ಸೆರೆ
ಮಂಗಳೂರು, ಫೆ.3: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಜೆಪದವು ಎಂಬಲ್ಲಿನ ಮನೆಯೊಂದಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ಒಂಟಿ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ ಎನ್ನಲಾಗಿದೆ.
ಮನೆಮನೆಗಳಿಗೆ ತೆರಳಿ ಓಮಸತ್ವ ಮಾರುತ್ತಿರುವ ಕೆಂಚನಕೆರೆಯ ಇಕ್ಬಾಲ್(49) ಎಂಬಾತ ಗುರುವಾರ ಪಡುಪೆರಾರದ ಕಜೆಪದವು ಎಂಬಲ್ಲಿನ ಮನೆಯೊಂದಕ್ಕೆ ಹೋದ ವೇಳೆ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಮಹಿಳೆ ಬೊಬ್ಬೆ ಹಾಕಿದಾಗ ಮನೆಯಿಂದ ಹೊರಗೆ ಓಡಿ ಹೋದ ಇಕ್ಬಾಲ್‌ನನ್ನು ಸ್ಥಳೀಯರು ಬೆನ್ನಟ್ಟಿ ಹಿಡಿದು ಬಜ್ಪೆ ಪೊಲೀಸರಿಗೊಪ್ಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಿಚಾರಣೆ ಬಳಿಕ ಆರೋಪಿಯನ್ನು ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
Next Story