ಅರಣ್ಯ ವಾಸಿಗಳಿಗೆ ಆಗುತ್ತಿರುವ ಕಿರುಕುಳ ನಿಲ್ಲಬೇಕು: ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು, ಫೆ.3: ಕೊಡಗು ಜಿಲ್ಲೆಯ ನಾಗರಹೊಳೆ ಅರಣ್ಯ ವಾಸಿಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಂದ, ಅರಣ್ಯ ನಿವಾಸಿಗಳಿಗೆ, ಆಗುತ್ತಿರುವ ಕಿರುಕುಳ ತಪ್ಪಿಸುವಂತೆ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ನಿರ್ದೇಶನ ನೀಡಿದ್ದಾರೆ.
ಗುರುವಾರ ತಮ್ಮನ್ನು ಭೇಟಿ ಮಾಡಿ, ಅರಣ್ಯಾಧಿಕಾರಿಗಳಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಜೇನು ಕುರುಬ ಸಮುದಾಯದ ಸುಶೀಲಾ ಮತ್ತು ಶಿವು ಅವರು, ಸಚಿವರ ಗಮನ ಸೆಳೆದಿದ್ದರು.
ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸಚಿವರು, ಯಾರ ರಕ್ಷಣೆಯೂ ಇರದ, ಅತ್ಯಂತ ದಯನೀಯ ಪರಿಸ್ಥಿತಿಯಲ್ಲಿ, ಬದುಕನ್ನು ಕಟ್ಟಿಕೊಂಡಿರುವ, ಅರಣ್ಯ ವಾಸಿಗಳಿಗೆ, ಎಲ್ಲ ರೀತಿಯ ರಕ್ಷಣೆ ಒದಗಿಸುವಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯವರಿಗೆ, ನಿರ್ದೇಶನ ನೀಡಿದರು.
ನಾಗರ ಹೊಳೆ ಪ್ರದೇಶಕ್ಕೆ ಭೇಟಿ ನೀಡಿ, ಅರಣ್ಯ ವಾಸಿಗಳನ್ನು ಭೇಟಿ ಮಾಡಿ, ಅವರ ಅಹವಾಲು ಗಳನ್ನು ಸ್ವತಃ ಸ್ವೀಕರಿಸುತ್ತೇನೆ, ಎಂದೂ ಭರವಸೆ ನೀಡಿದರು. ವಿಧಾನ ಪರಿಷತ್ ಸದಸ್ಯ ಶ್ರೀ ಶಾಂತ ರಾಮ್ ಸಿದ್ಧಿ ಅವರೂ ಉಪಸ್ಥಿತರಿದ್ದರು.





