ಸಿ.ಎಂ. ಇಬ್ರಾಹೀಂ ಹೇಳಿಕೆಗೆ ಕೆ.ಎಸ್. ಮಸೂದ್ ಖಂಡನೆ
ಮಂಗಳೂರು, ಫೆ.4: ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ, ಮಾಜಿ ಸಚಿವ ಯು.ಟಿ.ಖಾದರ್ ಅವರಿಗೆ ಕಾಂಗ್ರೆಸ್ ಪಕ್ಷವು ಪ್ಯಾಂಟ್ ಕೊಡಲಿಲ್ಲ ಚಡ್ಡಿ ಕೊಟ್ಟಿರುವುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹೀಂ ಇತ್ತೀಚೆಗೆ ಮೈಸೂರಿನಲ್ಲಿ ನೀಡಿರುವ ಹೇಳಿಕೆಯು ಖಂಡನೀಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಮುಹಮ್ಮದ್ ಮಸೂದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಹಲವಾರು ಉನ್ನತ ಹುದ್ದೆಗಳನ್ನು ನಿರ್ವಹಿಸಿ ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾಗಿರುವ ಸಿ.ಎಂ. ಇಬ್ರಾಹೀಂ ಅವರು ಇಂತಹ ಮಾತುಗಳನ್ನಾಡಿರುವುದು ಖೇದಕರ ವಿಷಯವಾಗಿದೆ. ಇದನ್ನು ಖಂಡಿಸಿ ತಾನು ಅವರಿಗೆ ಪತ್ರವನ್ನೂ ಬರೆದಿರುವೆ ಎಂದು ತಿಳಿಸಿದ್ದಾರೆ.
Next Story





