ಓಡೋಡಿಕೊಂಡು ಹೋಗಿ ನಾಮಪತ್ರಗಳನ್ನು ಸಲ್ಲಿಸಿದ ಉತ್ತರಪ್ರದೇಶ ಕ್ರೀಡಾ ಸಚಿವ ಉಪೇಂದ್ರ ತಿವಾರಿ
ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್

Photo: twitter
ಲಕ್ನೊ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ರಾಜ್ಯ ಕ್ರೀಡಾ ಸಚಿವ ಉಪೇಂದ್ರ ತಿವಾರಿ ಶುಕ್ರವಾರ ಬಲ್ಲಿಯಾ ಕಲೆಕ್ಟರೇಟ್ನಲ್ಲಿರುವ ಚುನಾವಣಾಧಿಕಾರಿ ಕಚೇರಿಯತ್ತ ಓಡೋಡಿಕೊಂಡು ಹೋಗುತ್ತಿರುವುದು ಕಂಡುಬಂದಿತು.
ತಿವಾರಿ ಅವರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಜಿಲ್ಲೆಯ ಫೆಫ್ನಾ ಅಸೆಂಬ್ಲಿ ಸ್ಥಾನದಿಂದ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊ ತುಣುಕಿನಲ್ಲಿ, ತಿವಾರಿ ತಲೆಗೆ ಕೇಸರಿ ಬಟ್ಟೆ ಹಾಗೂ ಕುತ್ತಿಗೆ ತುಂಬಾ ಹಾರವನ್ನು ಧರಿಸಿ ಬಲ್ಲಿಯಾ ಕಲೆಕ್ಟರೇಟ್ ಕಚೇರಿಯ ಮುಖ್ಯ ಗೇಟ್ನಿಂದ ನಾಮನಿರ್ದೇಶನ ಸಭಾಂಗಣಕ್ಕೆ ಓಡುತ್ತಿರುವುದನ್ನು ಕಾಣಬಹುದು.
ಫೆಫ್ನಾ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಫೆಬ್ರವರಿ 11 ಕೊನೆಯ ದಿನವಾಗಿದ್ದರೂ ಶುಕ್ರವಾರ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕಿತ್ತು. ಹೀಗಾಗಿ ಸಮಯಕ್ಕೆ ಸರಿಯಾಗಿ ಕಚೇರಿ ತಲುಪಲು ತಿವಾರಿ ಓಡಿಕೊಂಡು ಹೋದರು. ತಿವಾರಿಯ ಜೊತೆಗೆ ಅವರ ಭದ್ರತಾ ಸಿಬ್ಬಂದಿ ಕೂಡ ಅವರ ಜೊತೆ ಓಡುತ್ತಿರುವುದು ಕಂಡುಬಂದಿದೆ.
#WATCH | UP Sports Minister Upendra Tiwari sprinted to Collectorate Office in Ballia y'day as he was running late to file his nomination. Y'day nominations were scheduled to be filed by 3 pm & the minister was running late, nomination process still ongoing#UttarPradeshElections pic.twitter.com/99HSIPHwoA
— ANI UP/Uttarakhand (@ANINewsUP) February 5, 2022







