ಕಲ್ಲಿಕೋಟೆ: ಡಾ. ಅಬ್ದುಲ್ ಹಕೀಂ ಅಝ್ಹರಿ ರವರ ನೇತೃತ್ವದಲ್ಲಿ ಕನ್ನಡ ಗ್ರಂಥಾಲಯಕ್ಕೆ ಚಾಲನೆ

ಕಲ್ಲಿಕೋಟೆ: ಜಾಮಿಅ ಮದೀನತುನ್ನೂರ್, ಪೂನೂರು ಸಂಸ್ಥೆಯ ಲೈಫ್ ಫೆಸ್ಟಿವಲ್ ಆದ 'ರೆಂಡಿವ್ಯೂ' ಇದರ ಭಾಗವಾಗಿ ನೂತನ ಕನ್ನಡ ಗ್ರಂಥಾಲಯಕ್ಕೆ ಜಾಮಿಅ ರೆಕ್ಟರ್ ಡಾ. ಅಬ್ದುಲ್ ಹಕೀಂ ಅಝ್ಹರಿ ರವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
ಲೈಬ್ರರಿ ಉದ್ಘಾಟಿಸಿ ಮಾತನಾಡಿದ ಅವರು, "ಖುರ್ಆನಿನ ಪ್ರಥಮ ಪದವೇ 'ನೀವು ಓದಿರಿ' ಎಂದಾಗಿದೆ. ಮಲಯಾಳಂ, ಆಂಗ್ಲ, ಅರಬಿಕ್, ಉರ್ದು ಭಾಷೆಗಳಲ್ಲಿರುವ ಪುಸ್ತಕಗಳು ಈಗಾಗಲೇ ಮರ್ಕಝ್ ಗಾರ್ಡನ್ ಸೆಂಟ್ರಲ್ ಲೈಬ್ರರಿಯಲ್ಲಿ ಲಭ್ಯವಿದ್ದು, ಕರುನಾಡ ವಿದ್ಯಾರ್ಥಿಗಳ ಓದಿನ ದಾಹ ತಣಿಸಲು ಕನ್ನಡ ಗ್ರಂಥಾಲಯ ಸಹಕಾರಿಯಾಗಲಿದೆ" ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಹಂದರ್ದ್ ವಿಶ್ವವಿದ್ಯಾನಿಲಯ ಪ್ರೊಫೆಸರ್ ಡಾ. ಅಬ್ದುಲ್ ಖಾದಿರ್ ಅಲ್ ಹಬೀಬ್ ಹಾಗೂ ಬಿಲಾಲ್ ಅಹ್ಮದ್ ಅಲ್ ಖಾದಿರಿ ಶುಭ ಹಾರೈಸಿದರು. ಜಾಮಿಅ ಮ್ಯಾನೇಜರ್ ಅಬೂ ಸ್ವಾಲಿಹ್ ಸಖಾಫಿ ಮಂಗಳೂರು, ಪ್ರೊ ರೆಕ್ಟರ್ ಆಸಫ್ ನೂರಾನಿ ಉಪಸ್ಥಿತರಿದ್ದರು.

Next Story





