ತಮಿಳುನಾಡು ನೀಟ್ ರದ್ದತಿ ಮಸೂದೆ ಅನುಮೋದನೆಗೆ ವಿಶೇಷ ವಿಧಾನಸಭಾ ಅಧಿವೇಶನ ಕರೆಯಲಿರುವ ರಾಜ್ಯ ಸರಕಾರ

ಚೆನ್ನೈ,ಫೆ.5: ವೈದ್ಯಕೀಯ ಕೋರ್ಸ್‌ಗಳಿಗೆ ಸೇರಲು ನೀಟ್ ಪರೀಕ್ಷೆಯಿಂದ ವಿನಾಯಿತಿ ನೀಡುವ ರಾಜ್ಯದ ಮಸೂದೆಯನ್ನು ಅಂಗೀಕರಿಸಲು ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲಾಗುವುದು ಹಾಗೂ ಮಸೂದೆಯನ್ನು ಮತ್ತೆ ರಾಜ್ಯಪಾಲರಿಗೆ ಮರಳಿಸಲಾಗುವುದು ಎಂದು ತಮಿಳುನಾಡು ಆರೋಗ್ಯ ಸಚಿವ ಎಂ.ಸುಬ್ರಮಣಿಯನ್ ಅವರು ಶನಿವಾರ ಇಲ್ಲಿ ತಿಳಿಸಿದರು.
ವಿಧಾನಸಭಾ ಸ್ಪೀಕರ್ ಎಂ.ಅಪ್ಪಾವು ಅವರು ಶೀಘ್ರವೇ ವಿಶೇಷ ಅಧಿವೇಶನಕ್ಕಾಗಿ ದಿನಾಂಕವನ್ನು ಪ್ರಕಟಿಸಲಿದ್ದಾರೆ ಎಂದೂ ಅವರು ಹೇಳಿದರು.
ವಿಧಾನಸಭಾ ಸ್ಪೀಕರ್ ಗೆ ಮಸೂದೆಯನ್ನು ಮರಳಿಸುವ ಮುನ್ನ ರಾಜ್ಯಪಾಲ ಆರ್.ಎನ್.ರವಿ ಅವರು ಅದನ್ನು 143 ದಿನಗಳ ಕಾಲ ತನ್ನ ಬಳಿಯಲ್ಲಿಟ್ಟುಕೊಂಡಿದ್ದರು ಎಂದು ಶನಿವಾರ ನಡೆದ ಸರ್ವಪಕ್ಷ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಿಳಿಸಿದರು.
ಸೆಪ್ಟಂಬರ್ನಲ್ಲಿ ಅಂಗೀಕರಿಸಲಾಗಿದ್ದ ಮಸೂದೆಯು ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶಕ್ಕಾಗಿ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗುವುದಕ್ಕೆ ವಿನಾಯಿತಿ ನೀಡಲು ಉದ್ದೇಶಿಸಿತ್ತು. ವೈದ್ಯಕೀಯ ಕೋರ್ಸ್‌ಗಳಿಗೆ 12ನೇ ತರಗತಿಯ ಫಲಿತಾಂಶದ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಮಸೂದೆಯು ಪ್ರಸ್ತಾಪಿಸಿತ್ತು.
ಗುರುವಾರ ಮಸೂದೆಯನ್ನು ವಿಧಾನಸಭಾ ಸ್ಪೀಕರ್ಗೆ ಮರಳಿಸಿದ್ದ ರಾಜ್ಯಪಾಲರು,ಅದು ವಿದ್ಯಾರ್ಥಿಗಳ,ವಿಶೇಷವಾಗಿ ಗ್ರಾಮೀಣ ಮತ್ತು ಬಡವಿದ್ಯಾರ್ಥಿಗಳ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದರು.
ನ್ಯಾ.ಎ.ಕೆ.ರಾಜನ್ ನೇತೃತ್ವದ ಸಮಿತಿಯ ಶಿಫಾರಸಿನ ಮೇರೆಗೆ ರಾಜ್ಯದ ಎಂಟು ಕೋಟಿ ಜನರ ಭಾವನೆಗಳನ್ನು ಪ್ರತಿಬಿಂಬಿಸಲು ವಿಧಾನಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಆದರೆ ರಾಜ್ಯಪಾಲರು ಅದನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಳುಹಿಸಲು ಕ್ರಮವನ್ನು ಕೈಗೊಂಡಿರಲಿಲ್ಲ. ತನ್ಮೂಲಕ ತನ್ನ ಸಾಂವಿಧಾನಿಕ ಕರ್ತವ್ಯ ನಿರ್ವಹಿಸುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಸ್ಟಾಲಿನ್ ಶನಿವಾರದ ಸಭೆಯಲ್ಲಿ ಹೇಳಿದರು.
ಸರ್ವೋಚ್ಚ ನ್ಯಾಯಾಲಯವು ನೀಟ್ ಪರೀಕ್ಷೆಯನ್ನು ಎತ್ತಿಹಿಡಿದಿದೆ ಎಂಬ ರಾಜ್ಯಪಾಲರ ಹೇಳಿಕೆಯ ಕುರಿತಂತೆ ಸ್ಟಾಲಿನ್,ಅವರು ಉಲ್ಲೇಖಿಸಿರುವ ತೀರ್ಪು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ್ದು,ರಾಜ್ಯ ಶಾಸಕಾಂಗದ ಅಧಿಕಾರಗಳಿಂದ ಭಿನ್ನವಾಗಿದೆ ಎಂದರು. ಎಐಎಡಿಎಂಕೆ ಮತ್ತು ಬಿಜೆಪಿ ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸಿದ್ದವು. ಆದಾಗ್ಯೂ ಸುಬ್ರಮಣಿಯನ್,ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಎಐಎಡಿಎಂಕೆ ಪಾಲ್ಗೊಳ್ಳಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ನಾಳೆ ಅದನ್ನು ರಾಜಪಾಲರ ಅಂಗೀಕಾರಕ್ಕಾಗಿ ಮತ್ತೆ ಕಳುಹಿಸಲಾಗುವುದು.
ವಿಶೇಷ ಅಧಿವೇಶನ ನಡೆಯುವ ದಿನಾಂಕವನ್ನು ವಿಧಾನಸಭಾ ಸ್ಪೀಕರ್ ಎಂ ಅಪ್ಪವು ಅವರು ಘೋಷಿಸಲಿದ್ದಾರೆ ಎಂದು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ತಿಳಿಸಿದ್ದಾರೆ.
ಈ ಮಸೂದೆಗೆ ತಮಿಳುನಾಡು ವಿಧಾನಸಭೆ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಅನುಮೋದನೆ ನೀಡಿತ್ತು. ಮಸೂದೆಯನ್ನು ತಮಿಳುನಾಡು ರಾಜ್ಯಪಾಲರಾದ ಬಿ ಎನ್ ರವಿ ಅವರು ತಮ್ಮ ಬಳಿ 143 ದಿನಗಳ ಕಾಲ ಇರಿಸಿ ನಂತರ ಅದನ್ನು ಸ್ಪೀಕರ್ ಅವರಿಗೆ ವಾಪಸ್ ನೀಡಿದ್ದರು ಎಂದು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಶನಿವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ತಿಳಿಸಿದ್ದಾರೆ.
ರಾಜ್ಯಕ್ಕೆ ರಾಷ್ಟ್ರಮಟ್ಟದ ನೀಟ್‍ನಿಂದ ವಿನಾಯಿತಿ ನೀಡಿ 12ನೇ ತರಗತಿ ಪರೀಕ್ಷಾ ಫಲಿತಾಂಶಗಳ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುವ ಉದ್ದೇಶದಿಂದ ರಾಜ್ಯ ಸರಕಾರ ಈ ಮಸೂದೆ ಸಿದ್ಧಪಡಿಸಿದೆ.
ಈ ಮಸೂದೆ ವಿದ್ಯಾರ್ಥಿಗಳ, ಪ್ರಮುಖವಾಗಿ ಗ್ರಾಮೀಣ ಮತ್ತು ಬಡ ಕುಟುಂಬಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೇಳಿ ರಾಜ್ಯಪಾಲರು ಅದನ್ನು ಗುರುವಾರ ವಾಪಸ್ ಕಳುಹಿಸಿದ್ದರು.
ರಾಜ್ಯದಲ್ಲಿ ನೀಟ್ ರದ್ದತಿ ಮಸೂದೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದೆ ರಾಜ್ಯಪಾಲರು ತಮ್ಮ ಸಾಂವಿಧಾನಿಕ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಸ್ಟಾಲಿನ್ ಹೇಳಿದರು.
ಸುಪ್ರೀಂ ಕೋರ್ಟ್ ನೀಟ್ ಅನ್ನು ಎತ್ತಿ ಹಿಡಿದಿದೆ ಎಂಬ ರಾಜ್ಯಪಾಲರ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ಟಾಲಿನ್, ಅದು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ್ದು ಹಾಗೂ ಅದರು ರಾಜ್ಯ ಶಾಸಕಾಂಗದ ಶಾಸಕಾಂಗ ಅಧಿಕಾರಗಳಿಗಿಂತ ಭಿನ್ನವಾಗಿದೆ ಎಂದಿದ್ದಾರೆ.
ಶನಿವಾರದ ಸರ್ವಪಕ್ಷದ ಸಭೆಯನ್ನು ಎಐಎಡಿಎಂಕೆ ಮತ್ತು ಬಿಜೆಪಿ ಬಹಿಷ್ಕರಿಸಿದ್ದವು.







