ಹಿಜಾಬ್ ವಿಚಾರ ಬಿಜೆಪಿಗರ ವ್ಯವಸ್ಥಿತ ಹುನ್ನಾರ: ನವೀನ್ ಸಾಲ್ಯಾನ್
ಉಡುಪಿ, ಫೆ.5: ಹಿಜಾಬ್ ವಿಚಾರ ಬಿಜೆಪಿಗರ ವ್ಯವಸ್ಥಿತ ಹುನ್ನಾರವಾಗಿದೆ ಎಂದು ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಸಾಲ್ಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯೋಜನೆಗಳು ಸಂಪೂರ್ಣ ವಿಫಲವಾದ ಜನರ ಮನಸ್ಸನ್ನು ಬೇರೆ ಕಡೆ ಕೇಂದ್ರಿಕರಿಸಲು ಬಿಜೆಪಿಯವರು ಮಾಡುವ ಷಡ್ಯಂತ್ರಗಳ ಹಲವಾರು ಆಗಿದ್ದು ಹಿಜಾಬ್ ಕೂಡ ಅದೇ ಪುಸ್ತಕದ ಒಂದು ಕಥೆಯಾಗಿದೆ. ವಿದ್ಯಾರ್ಥಿಗಳ ಜೀವನ ದಲ್ಲಿ ಓದಿನ ಬದಲು ಧರ್ಮದ ಅಮಲನ್ನು ಏರಿಸಿ ತಮ್ಮ ಬೇಳೆ ಬೇಯಿಸಿ ಕೊಳ್ಳುವ ವ್ಯವಸ್ಥಿತ ಅಜೆಂಡಾ ಆಗಿದೆ. ವಿದ್ಯಾರ್ಥಿಗಳನ್ನು ಮುಂದೆ ಇಟ್ಟು ರಾಜಕೀಯ ಮಾಡುವುದು ಬಿಟ್ಟು ನೀವೆ ಸೃಷ್ಠಿಸಿದ ಹಿಜಾಬ್ ವಿಚಾರವನ್ನು ಸರಿಪಡಿಸಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story