ಹಿಜಾಬ್ ಗೊಂದಲಕ್ಕೆ ಬಿಜೆಪಿ, ಹಿಂದುತ್ವ ಪರ ಸಂಘಟನೆಗಳು ಕಾರಣ: ಗುಲಾಂ ಮುಹಮ್ಮದ್
ಉಡುಪಿ, ಫೆ.5: ಹಿಜಾಬ್ ಪ್ರಕರಣ ಸಂಬಂಧಿಸಿ ವಿವಾದ ತಾರಕಕ್ಕೆ ಏರಲು ಸಂಘಪರಿವಾದ ಸಂಘಟನೆಗಳೇ ನೇರ ಕಾರಣ ಎಂದು ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಉಪಾಧ್ಯಕ್ಷ ಗುಲಾಂ ಮುಹಮ್ಮದ್ ಆರೋಪಿಸಿದ್ದಾರೆ.
ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳು ಶಿರವಸ್ತ್ರಗಳನ್ನು ಸಾಂಪ್ರದಾಯ ದಂತೆ ಹಾಕಿಯೇ ಶಾಲೆಗೆ ಹಾಜರಾಗುತಿದ್ದು, ಇದನ್ನು ವಿವಾದವಾಗಿ ಹುಟ್ಟು ಹಾಕಿ ಶಾಲೆಗಳಿಗೆ ಶಿರವಸ್ತ್ರಗಳನ್ನು ಹಾಕದಂತೆ ತಡೆಯುವ ಯತ್ನವಾಗಿ ಕೇಸರಿ ಶಾಲುಗಳನ್ನು ಧರಿಸಿ ಬರುತಿದ್ದು, ಇವರಿಗೆ ಬಿಜೆಪಿ ಹಾಗೂ ಸಂಘಪರಿವಾರ ಸಂಘಟನೆಗಳು ಕುಮ್ಮಕ್ಕು ನೀಡುತ್ತಿವೆ ಎಂದು ಅವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
Next Story