ಹಿಜಾಬ್ ವಿವಾದ ಅಂತಾರಾಷ್ಟ್ರೀಯ ಸಂಚು: ಸುರೇಶ್ ನಾಯಕ್ ಆರೋಪ
ಉಡುಪಿ, ಫೆ.5: ಉಡುಪಿ ಜಿಲ್ಲೆ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ಈಗ ಚರ್ಚೆಯಲ್ಲಿರುವ ಹಿಜಾಬ್ ಕುರಿತ ವಿವಾದದ ಹಿಂದೆ ಅಂತಾರಾಷ್ಟ್ರೀಯ ಸಂಚು ಇದೆ. ಇದನ್ನು ಭೇದಿಸಬೇಕು ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸರಕಾರವನ್ನು ಆಗ್ರಹಿಸಿದ್ದಾರೆ.
ಇದಕ್ಕೆ ಅಂತಾರಾಷ್ಟ್ರೀಯ ಮುಸ್ಲಿಂ ಸಂಘಟನೆಗಳ ಆರ್ಥಿಕ ನೆರವು ನೀಡುತ್ತದೆ ಎಂಬ ಗುಮಾನಿ ಇದೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯ ಮಂತ್ರಿಗಳಾದ ಮೆಹಬೂಬ ಮುಫ್ತಿ ಮತ್ತು ಒಮರ್ ಅಬ್ದುಲ್ಲಾರ ಮಾತು ಹಾಗೂ ಅಂತಾರಾಷ್ಟ್ರೀಯ ಚಾನಲ್ಗಳು ಇದನ್ನು ಪದೇ ಪದೇ ಬಿತ್ತರಿಸುವುದು ನೋಡಿದರೆ ಈ ಗುಮಾನಿಗೆ ಇನ್ನಷ್ಟು ಪುಷ್ಟಿ ಬರುತ್ತದೆ. ದೇಶದ ಆಂತರಿಕ ಭದ್ರತೆಯ ಹಿತ ದೃಷ್ಠಿಯಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಸಂಚು ಮತ್ತು ಜಾಲವನ್ನು ಬಯಲಿ ಗೆಳೆಯಬೇಕೆಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
Next Story





