ಧಾರ್ಮಿಕ ಸ್ವಾತಂತ್ರ್ಯ ನಿರ್ನಾಮ ಮಾಡುವ ಷಡ್ಯಂತರ: ಹಂಝ ಫೈಝಿ ತೋಡಾರ್
ಉಡುಪಿ, ಫೆ.5: ಉಡುಪಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಅನ್ನು ನೆಪವಾಗಿಟ್ಟುಕೊಂಡು ಕೆಲವು ಶಿಕ್ಷಣ ಸಂಸ್ಥೆ ಗಳಿಂದ ವಿಧ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಹತ್ತಿಕ್ಕುವ ಸಂವಿಧಾನ ವಿರೋಧಿ ಪ್ರಕ್ರಿಯೆಗಳು ದೈನಂದಿನ ಹೆಚ್ಚುತ್ತಿದೆ. ಮೇಲ್ನೋಟಕ್ಕೆ ಒಂದು ಸಮುದಾಯದ ಸಾಕ್ಷರತೆಯ ಮೇಲುಗೈಯನ್ನು ಸಹಿಸಲಾಗದೆ ಈ ರೀತಿಯ ಹುನ್ನಾರಗಳು ನಡೆಯುತ್ತಿದೆ ಎಂದು ಸಮಸ್ತ ಕೇರಳ ಜಂಇಯತುಲ್ ಮುಅಲ್ಲಿಮೀನ್ ಉಡುಪಿ ಜಿಲ್ಲಾ ಕಾರ್ಯದರ್ಶಿ ಹಂಝ ಫೈಝಿ ತೋಡಾರ್ ತಿಳಿಸಿದ್ದಾರೆ.
ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ವ್ಯಕ್ತಿ ಸ್ವಾತಂತ್ರ್ಯ ವನ್ನು ಧಮನಿಸುವ ಹಾಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನಿರ್ನಾಮ ಮಾಡುವ ಷಡ್ಯಂತ್ರವು ಸಹಿಸುವಂತದ್ದಲ್ಲ. ವಾರ್ಷಿಕ ಪರೀಕ್ಷೆಯ ಸನಿಹದಲ್ಲಿದ್ದು, ಈ ರೀತಿಯ ತಾರತಮ್ಯ ನೀತಿಯು ವಿಧ್ಯಾರ್ಥಿಗಳ ಮುಂದಿನ ಭವಿಷ್ಯವನ್ನು ಹಾಳು ಮಾಡುತ್ತದೆ. ಆದಷ್ಟು ಬೇಗ ತರಗತಿಯಲ್ಲಿ ವಿಧ್ಯಾರ್ಥಿಗಳ ಶಿಕ್ಷಣಕ್ಕೆ ಅನುವು ಮಾಡಿ ಕೊಡಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.





