ಹೋಂಡಾ ಸಿಬಿ 350 ಹೈನೆಸ್ ಆ್ಯನಿವರ್ಸರಿ ಎಡಿಷನ್, ಸಿಬಿ300ಆರ್ ಬೈಕ್ ಮಂಗಳೂರು ಮಾರುಕಟ್ಟೆಗೆ ಬಿಡುಗಡೆ

ಮಂಗಳೂರು : ಮಂಗಳೂರು ಉತ್ತರದ ಕೊಟ್ಟಾರ ಚೌಕಿ ಬಳಿ ಇರುವ ಹೋಂಡಾ ಬಿಗ್ ವಿಂಗ್ ಶೋರೂಂ ನಲ್ಲಿಂದು ಹೊಂಡಾ ಮೋಟಾರ್ ಸಂಸ್ಥೆಯ ನೂತನ ಮೋಟಾರ್ ಬೈಕ್ ಗಳಾದ ಹೋಂಡಾ ಸಿಬಿ 350 ಹೈನೆಸ್ ಆ್ಯನಿವರ್ಸರಿ ಎಡಿಷನ್ ಮತ್ತು ಸಿಬಿ300ಆರ್ ಮಂಗಳೂರಿನ ಮಾರುಕಟ್ಟೆಗೆ ಬಿಡುಗಡೆಗೊಂಡಿತು.
ನೂತನ, ಅತ್ಯಾಕರ್ಷಕ ಬೈಕ್‌ಗಳನ್ನು ಕಾಂಚನಾ ಹುಂಡೈ ಮೋಟಾರ್ಸ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಪ್ರಸಾದ್ ರಾಜ್ ಕಾಂಚನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಶುಭ ಹಾರೈಸಿದರು.
ಹೋಂಡಾ ಬಿಗ್ ವಿಂಗ್ ಶೋರೂಂ ಆರಂಭದಿಂದಲೂ, ಮಾರಾಟ ವಿಭಾಗ ಹಾಗೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ. ಕಳೆದೊಂದು ವರ್ಷದಲ್ಲಿ ಈ ಶೋರೂಂ ಮೂಲಕ 500 ಬೈಕ್ ಗಳು ಮಾರಾಟವಾಗಿವೆ. ನಮ್ಮ ಸಂಸ್ಥೆಯ ವತಿಯಿಂದ ಹೋಂಡಾ ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಸಂಸ್ಥೆಯ ಜನರಲ್ ಮ್ಯಾನೇಜರ್ ಪ್ರತೀಕ್ ಕಾಮತ್ ಉಪಸ್ಥಿತರಿದ್ದರು. ಗಿರೀಶ್ ಶೇಟ್ ನೂತನ ಬೈಕ್‌ಗಳ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. ಇಯಾನ್ ಅರಾನ್ಹ ಕಾರ್ಯಕ್ರಮ ನಿರೂಪಿಸಿದರು.
300 ಸಿಸಿ ಮತ್ತು 350 ಸಿ.ಸಿ. ಸಾಮರ್ಥ್ಯದ ಈ ಎರಡು ಬೈಕ್‌ಗಳು ಹೆಚ್ಚು ಸುರಕ್ಷತೆಗೆ ಒತ್ತು ನೀಡುವ ಸೌಕರ್ಯಗಳನ್ನು ಹೊಂದಿವೆ. ಸೀಟ್, ಡಿಸ್ಕ್ ಬ್ರೇಕ್, ಸಂಪೂರ್ಣ ಎಲ್‌ಸಿಡಿ ಮೀಟರ್, ಎಲ್‌ಇಡಿ ಹೆಡ್‌ಲೈಟ್, 15 ಲೀಟರ್ ಇಂಧನ ಸಾಮರ್ಥ್ಯ, ಇಂಧನ ಕ್ಷಮತೆ, ವೇಗ ಮತ್ತು ಸವಾರರಿಗೆ ಆರಾಮದಾಯಕ ಸವಾರಿಯ ಅನುಭವ ನೀಡುವ ವಿಶೇಷತೆ ಹೊಂದಿದೆ. ವಾಹನ ವಿನಿಮಯದ ಅವಕಾಶವನ್ನು ನೀಡಲಾಗುವುದು ಎಂದು ಸಂಸ್ಥೆಯ ಪ್ರತಿನಿಧಿ ತಿಳಿಸಿದ್ದಾರೆ.







