ಮಿನಿ ಬಸ್ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಮೃತ್ಯು
ಬ್ರಹ್ಮಾವರ, ಫೆ.5: ಮಿನಿ ಬಸ್ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರರೊಬ್ಬರು ಮೃತಪಟ್ಟ ಘಟನೆ ಫೆ.4ರಂದು ಸಂಜೆ ವೇಳೆ ಹೆಗ್ಗುಂಜೆ ಗ್ರಾಮದ ನಡುಜೆಡ್ಡು ಕ್ರಾಸ್ ಎಂಬಲ್ಲಿ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ರಮೇಶ್ ನಾಯ್ಕ ಎಂದು ಗುರುತಿಸಲಾಗಿದೆ. ಇವರು ತನ್ನ ದ್ವಿಚಕ್ರವನ್ನು ಮಂದಾರ್ತಿ ಕಡೆಯಿಂದ ನಡುಜೆಡ್ಡು ಕ್ರಾಸ್‌ನಲ್ಲಿ ಸಾಯಿಬ್ರಕಟ್ಟೆ ರಸ್ತೆ ಕಡೆಗೆ ತಿರುಗಿಸುವಾಗ ಹಿಂದಿನಿಂದ ಬಂದ ಮಿನಿ ಬಸ್ ಡಿಕ್ಕಿ ಹೊಡೆಯಿತ್ತೆನ್ನ ಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ರಮೇಶ್ ನಾಯ್ಕೆ, ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದು ಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು. ಮಿನಿಬಸ್ ಚಾಲಕ, ಬಸ್ಸನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





