ಮಾರಕಾಯುಧಗಳೊಂದಿಗೆ ಅಕ್ರಮ ಕೂಟ ಆರೋಪ : ಇಬ್ಬರ ಬಂಧನ
ಕುಂದಾಪುರ, ಫೆ.5: ಕುಂದಾಪುರ ಜ್ಯೂನಿಯರ್ ಕಾಲೇಜಿನ ಸಮೀಪ ಫೆ.4ರಂದು ಅಪರಾಹ್ನ ವೇಳೆ ಮಾರಕಾ ಯುಧಗಳೊಂದಿಗೆ ಅಕ್ರಮವಾಗಿ ಕೂಟ ಸೇರಿಕೊಂಡಿದ್ದ ಆರೋಪದಲ್ಲಿ ಐವರ ಪೈಕಿ ಇಬ್ಬರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಗಂಗೊಳ್ಳಿಯ ಅಬ್ದುಲ್ ಮಜೀದ್ (32) ಹಾಗೂ ರಜಬ್ (41) ಎಂದು ಗುರುತಿಸಲಾಗಿದೆ. ಖಲೀಲ್, ರಿಝ್ವಾನ್ ಹಾಗೂ ಇಫ್ತಿಕಾರ್ ಎಂಬ ವರು ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಅಬ್ದುಲ್ ಮಜೀದ್ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ 7 ಪ್ರಕರಣಗಳು ದಾಖಲಾಗಿದ್ದು ಅಲ್ಲದೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದಾನೆ. ರಜಬ್ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ. ಇವರು ಮತೀಯವಾಗಿ ಕೋಮು ಸಂಘರ್ಷ ಉಂಟು ಮಾಡುವ ಪ್ರವೃತ್ತಿಯವರಾಗಿದ್ದು ಮಾರಕಾ ಯುಧಗಳೊಂದಿಗೆ ಅಕ್ರಮ ಕೂಟ ಸೇರಿ ಹಠಾತ್ ಪ್ರಚೋದನೆಯಿಂದ ಮಾರಕಾಯುಧಗಳನ್ನು ಬೀಸಿ ಸಾರ್ವಜನಿಕರ ಪ್ರಾಣಕ್ಕೆ ಅಪಾಯ ಉಂಟು ಮಾಡಲು ಪ್ರಯತ್ನಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





