ಅಂಡರ್-19 ವಿಶ್ವಕಪ್: ಐದನೇ ಬಾರಿ ಪ್ರಶಸ್ತಿ ಜಯಿಸಲು ಭಾರತಕ್ಕೆ 190 ರನ್ ಗುರಿ
9 ವಿಕೆಟ್ ಹಂಚಿಕೊಂಡ ರಾಜ್ ಬಾವಾ, ರವಿ ಕುಮಾರ್

ರಾಜ್ ಬಾವಾ(5-31), Photo: ICC
ಆ್ಯಂಟಿಗುವಾ, ಫೆ.5: ಮಧ್ಯಮ ಕ್ರಮಾಂಕದ ಬ್ಯಾಟರ್ ಜೇಮ್ಸ್ ರೀವ್ (95 ರನ್, 116 ಎಸೆತ, 12 ಬೌಂ.)ಏಕಾಂಗಿ ಹೋರಾಟದ ಹೊರತಾಗಿಯೂ ವೇಗದ ಬೌಲರ್ಗಳಾದ ರಾಜ್ ಬಾವಾ(5-31) ಹಾಗೂ ರವಿ ಕುಮಾರ್(4-34) ನಿಖರ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಅಂಡರ್-19 ವಿಶ್ವಕಪ್ ಫೈನಲ್ನಲ್ಲಿ 44.5 ಓವರ್ಗಳಲ್ಲಿ 189 ರನ್ಗೆ ಆಲೌಟಾಯಿತು. ದಾಖಲೆಯ ಐದನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಭಾರತ ಗೆಲುವಿಗೆ ಸುಲಭ ಸವಾಲು ಪಡೆದಿದೆ.
ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ 91 ರನ್ಗೆ 7 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ 8ನೇ ವಿಕೆಟ್ಗೆ 93 ರನ್ ಜೊತೆಯಾಟ ನಡೆಸಿದ ಜೇಮ್ಸ್ ರೀವ್ ಹಾಗೂ ಜೇಮ್ಸ್ ಸೇವ್(ಔಟಾಗದೆ 34, 65 ಎಸೆತ)ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು.
ಜೋಶುವಾ ಬಾಯ್ಡನ್(1)ವಿಕೆಟನ್ನು ಕಬಳಿಸಿ ಇಂಗ್ಲೆಂಡ್ ಇನಿಂಗ್ಸ್ಗೆ ತೆರೆ ಎಳೆದ ರಾಜ್ ಬಾವಾ ಐದು ವಿಕೆಟ್ ಗೊಂಚಲು ಪಡೆದರು.
Next Story