ಬಿಜೆಪಿ ಕಾರ್ಯಕರ್ತರಿಗೆ ಪ್ರಣಾಳಿಕೆ ವಿತರಿಸಲು ತಮ್ಮ ವಾಹನ ನಿಲ್ಲಿಸಿದ ಪ್ರಿಯಾಂಕಾ ಗಾಂಧಿ: ವೀಡಿಯೊ ವೀಕ್ಷಿಸಿ

ಅಲಿಘರ್: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ನಡೆಸುತ್ತಿರುವ ರೋಡ್ ಷೋ ಮಧ್ಯೆ ಎದುರಾದ ಬಿಜೆಪಿ ಕಾರ್ಯಕರ್ತರೆಡೆಗೆ ಸ್ನೇಹದ ಹಸ್ತ ಚಾಚಲು ಪ್ರಿಯಾಂಕಾ ಗಾಂಧಿ ತಮ್ಮ ವಾಹನವನ್ನು ನಿಲ್ಲಿಸಿದ್ದಾರೆ.
ದಾರಿಯಲ್ಲಿ ಎದುರಾದ ಬಿಜೆಪಿ ಕಾರ್ಯಕರ್ತರತ್ತ ಮಂದಹಾಸ ಬೀರಿದ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ಅವರಿಗೆ ನೀಡಿದ್ದಾರೆ.
ಅಲಿಘರ್‌ನಲ್ಲಿ ನಡೆದ ರೋಡ್ ಷೋ ವೇಳೆ ಎದುರಾದ ಬಿಜೆಪಿ ಕಾರ್ಯಕರತ್ರು ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಆದಿತ್ಯನಾಥ್ ಪರವಾಗಿ ಘೋಷಣೆ ಕೂಗಿದ್ದಾರೆ. ಇದನ್ನು ಸಕರಾತ್ಮಕವಾಗಿ ಸ್ವೀಕರಿಸಿದ ಪ್ರಿಯಾಂಕ, ಚುನಾವಣಾ ಪ್ರಣಾಳಿಕೆ ನೀಡಿ ಇದನ್ನು ಓದಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರು ತಮ್ಮ ವಿರುದ್ಧ ಬಿಜೆಪಿ ಬಾವುಟಗಳನ್ನು ಹಾರಿಸುತ್ತಿದ್ದರೂ, ಬಿಜೆಪಿ ಉನ್ನತ ನಾಯಕರ ಪರವಾಗಿ ಘೋಷಿಸುತ್ತಿದ್ದರೂ ಅವರೆಡೆಗೆ ಸ್ನೇಹದ ಸಂಜ್ಞೆಗಳನ್ನು ತೋರುತ್ತಿರುವ ಪ್ರಿಯಾಂಕ ಗಾಂಧಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
#WATCH | Uttar Pradesh: Congress leader Priyanka Gandhi Vadra gave Congress' youth manifesto 'Bharti Vidhan' to BJP workers who were raising slogans in favor of PM Modi & CM Yogi during a roadshow in Aligarh ahead of #UPAssemblypolls2022 pic.twitter.com/YRDUn4smO2
— ANI UP/Uttarakhand (@ANINewsUP) February 5, 2022







