ಕೋಲಾರ: ಹೆಣ್ಣು ಮಗುವಿನ ಹತ್ಯೆ ಪ್ರಕರಣ; ಆರೋಪಿಗೆ ಜೀವಾವಧಿ ಶಿಕ್ಷೆ

ಕೋಲಾರ: 3 ವರ್ಷದ ಹೆಣ್ಣು ಮಗುವನ್ನು ಅಪಹರಿಸಿ ಕೊಲೆ ಮಾಡಿದ್ದ ಆರೋಪಿಗೆ ನಗರದ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ, 55 ಸಾವಿರ ದಂಢ ವಿಧಿಸಿದೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹುಲ್ಕೂರು ಗ್ರಾಮದ ಮುನಿರಾಜು 2019 ಏಪ್ರಿಲ್ 11 ರಂದು ಮದ್ಯ ರಾತ್ರಿ ಅದೇ ಗ್ರಾಮದ ಬೇರೊಬ್ಬರ ಮನೆಗೆ ನುಗ್ಗಿ ಮಹಿಳೆಯನ್ನು ಎಬ್ಬಿಸಿ ಸರಸವಾಡುವಂತೆ ಬಲವಂತ ಮಾಡಿದ್ದಾನೆ. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾಳೆ.
ಪಕ್ಕದಲ್ಲೆ ಮಲಗಿದ್ದ 3 ವರ್ಷದ ಹೆಣ್ಣು ಮಗುವಿನ ಬಾಯಿ ಮುಚ್ಚಿ ಕೋಂಡು ಮಹಿಳೆಗೆ ಬೆದರಿಸಿ ಮಗುವನ್ನ ಎತ್ತಿಕೊಂಡು ಹೋಗಿ ಕೊಲೆ ಮಾಡಿದ್ದಾನೆ.
ಮಗುವನ್ನು ಅಪಹರಿಸಿಕೋಂಡು ಹೋದ ಮುನಿರಾಜು ರಾಜಕಾಲುವೆ ಬಳಿ ಮಗುವಿನ ಕುತ್ತಿಗೆ ಹಿಸುಕಿ ಅಲ್ಲಿಯೆ ಬಿದ್ದಿದ್ದ ಮರಗಳ ಎಲೆಗಳ ಸುರಗಿನಿಂದ ಶವದ ಮೇಲೆ ಹಾಕಿ ಸುಟ್ಟು ಹಾಕಿದ್ದ. ಈ ಸಂಬಂಧ ಮಾಲೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ದೂರಿನ ತನಿಖೆ ನಡೆಸಿದ ಅಂದಿನ ಸಬ್ ಇನ್ಸ್ಪೆಕ್ಟರ್ ನಾಗಭೂಷಣ್ ಐಪಿಸಿ 201, 324ಂ(1),457,506, ಮತ್ತು 302 ರ ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಯನ್ನು ಬಂಧಿಸಿದ್ದರು. ಅಂದಿನ ವೃತ್ತ ನಿರೀಕ್ಷಕ ಸತೀಶ್ ತನಿಖಾಧಿಕಾರಿಯಾಗಿ ಪ್ರಕರಣ ಕೈಗೆತ್ತಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಸುದಿರ್ಘವಾದ ವಾದ ವಿವಾದ ನಡೆದು 22 ಮಂದಿ ಸಾಕ್ಷಿಗಳ ವಿಚಾರಣೆ ನಡೆದು ಮುನಿರಾಜು ಮೇಲಿನ ಕೊಲೆ ಆರೋಪ ಸಾಬೀತಾದ ಹಿನ್ನಲೆಯಲ್ಲಿ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಪವನೇಶ್ ಅವರು ಈ ತೀರ್ಪನ್ನು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ಕೆ.ಎಸ್ ಜ್ಯೋತಿಲಕ್ಷ್ಮಿ ವಾದ ಮಂಡಿಸಿದ್ದರು.







