ಸಮಸ್ತ ಸಹಾಯಹಸ್ತ ಯೋಜನೆಗೆ ಚಾಲನೆ

ಮಂಗಳೂರು, ಫೆ.5: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಸಹಾಯಹಸ್ತ ಯೋಜನೆ (ಸಾರಥಿ ಸಂಗಮ) ಹಾಗೂ ಸಹಾಯ ನಿಧಿ ಸಂಗ್ರಹಣೆಗೆ ಚಾಲನೆ ಕಾರ್ಯಕ್ರಮವು ಶನಿವಾರ ಮಿತ್ತಬೈಲು ಮುಹಿಯ್ಯುದ್ದೀನ್ ಮದ್ರಸದ ಆಡಿಟೋರಿಯಂನಲ್ಲಿ ನಡೆಯಿತು.
ದ.ಕ. ಜಿಲ್ಲಾ ಮುಶಾವರ ಪ್ರಧಾನ ಕಾರ್ಯದರ್ಶಿ ಬಂಬ್ರಾಣ ಅಬ್ದುಲ್ ಖಾದರ್ ಅಲ್ ಖಾಸಿಮಿಯ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ವಿದ್ಯಾಭ್ಯಾಸ ಬೋರ್ಡ್‌ನ ಪ್ರಧಾನ ಕಾರ್ಯದರ್ಶಿ ಎಂ.ಟಿ. ಅಬ್ದುಲ್ಲ ಮುಸ್ಲಿಯಾರ್ ಉದ್ಘಾಟಿಸಿದರು.
ಮಿತ್ತಬೈಲು ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಸಾಗರ್ ವ್ಯಕ್ತಿಗತ ಸಹಾಯಧನವನ್ನು ನೀಡಿ ದಕ್ಷಿಣ ಕರ್ನಾಟಕ ಮಟ್ಟದ ಸಹಾಯನಿಧಿ ಸಂಗ್ರಹಣೆಗೆ ಚಾಲನೆ ನೀಡಿದರು.
ಮೊಹಲ್ಲಾ ಸಬಲೀಕರಣ, ಸಂಸ್ಕರಣೆ, ಸಾಂಸ್ಕೃತಿಕ ಪ್ರಕ್ರಿಯೆಗಳು, ರಿಲೀಫ್ ಚಟುವಟಿಕೆಗಳಿಗಾಗಿ ಕೈಗೊಂಡ ಸಮಸ್ತ ಸಹಾಯಹಸ್ತ ಯೋಜನೆಯ ಬಗ್ಗೆ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿ ಕಾರ್ಯದರ್ಶಿ ಅಬ್ದುರಹ್ಮಾನ್ ಮುಸ್ಲಿಯಾರ್ ಕೊಡಗು ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ತೋಡಾರು ಉಸ್ಮಾನ್ ಫೈಝಿ, ಇಬ್ರಾಹಿಂ ಬಾಖವಿ ಕೆಸಿ ರೋಡ್, ಶಂಸುದ್ದಿನ್ ದಾರಿಮಿ ಪಮ್ಮಲೆ, ಶರೀಫ್ ಫೈಝಿ ಕಡಬ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಸಿದ್ದೀಕ್ ಅಬ್ದುಲ್ಲಾ ಬಂಟ್ವಾಳ, ಅಬ್ದುಲ್ಲಾ ಫೈಝಿ ಗೋಳ್ತಮಜಲು, ಅಬ್ದುಲ್ ಖಾದರ್ ಫೈಝಿ, ರಶೀದ್ ಮುಸ್ಲಿಯಾರ್, ಬೊಳಂತೂರ್ ಹನೀಫ್ ಮುಸ್ಲಿಯಾರ್, ಅಬ್ದುಸ್ಸಲಾಂ ಮಿತ್ತಬೈಲು ಮತ್ತಿತರರು ಪಾಲ್ಗೊಂಡಿದ್ದರು.
ದ.ಕ. ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಸ್ವಾಗತಿಸಿದರು. ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ವಂದಿಸಿದರು.