ವಿಟ್ಲ ಸೈಂಟ್ ರೀಟಾ ಹಿರಿಯ ಪ್ರಾಥಮಿಕ ಶಾಲೆ: ಹಳೆ ವಿದ್ಯಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮ
ನಿವೃತ್ತ ಶಿಕ್ಷಕಿಯರಿಗೆ ಸನ್ಮಾನ

ವಿಟ್ಲ, ಫೆ.5: ಸೈಂಟ್ ರೀಟಾ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ಇಲ್ಲಿನ ಆರು ಮಂದಿ ಶಿಕ್ಷಕಿಯರಿಗೆ ಗುರುವಂದನೆ ಕಾರ್ಯಕ್ರಮವನ್ನು ಜೆ.ಎಲ್ ಆಡಿಟೋರಿಯಂ ನೀರಕಣಿ ವಿಟ್ಲದಲ್ಲಿ ಇಂದು ಆಯೋಜಿಸಿದರು.
ನಿವೃತ್ತ ಶಿಕ್ಷಕಿಯರಾದ ದಿ.ರೆಜಿನಾ ರಸ್ಕಿನ಼್ ಅವರ ಪರವಾಗಿ ಪುತ್ರ ಸಂತೋಷ್ ಅವರು, ಮಾರ್ಗರೇಟ್ ಫರ್ನಾಂಡೀಸ್, ಜೂಲಿಯಾನ ಮೇರಿ ಲೋಬೊ, ವಿನ್ನಿ ಮಸ್ಕರೇನಸ್ ಮಂಗಳಪದವು, ಹಿಲ್ಡಾ ಮಸ್ಕರೇನಸ್, ಎಲಿಜಿ ಡಿಸೋಜ ಹಾಗೂ ಶಿಕ್ಷಕಿ ಲೀನಾ ವೇಗಸ್ ಇವರನ್ನು ಸೈಂಟ್ ರೀಟಾ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ಸನ್ಮಾನ ಮಾಡಿದರು.
ಇಪ್ಪತ್ತು ವರ್ಷ ದೇಶ ಸೇವೆ ಮಾಡಿ ನಿವೃತ್ತಿ ಹೊಂದಿರುವ ಶಾಲೆಯ ಹಳೆ ವಿದ್ಯಾರ್ಥಿಯಾಗಿಯೂ ಆಗಿರುವ ದಯಾನಂದ ಅವರನ್ನು ಇದೇ ವೇಳೆ ಅಭಿನಂದಿಸಲಾಯಿತು.
ಪುತ್ತೂರು ಫಿಲೋಮಿನ ಕಾಲೇಜ್ ಶಿಕ್ಷಕಿ ಜ್ಯೋತಿ ಸ್ವಾಗತಿಸಿದರು. ಸಿದ್ದಿಕ್ ಸರವು, ಇಕ್ಬಾಲ್ ಹಾಗೂ ಸವಿತಾ ಸಹಕರಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.
.jpeg)
Next Story







