Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬ್ರಾಹ್ಮಣರು ಮೀಸಲಾತಿಯ ಬಲಿಪಶುಗಳೇ?

ಬ್ರಾಹ್ಮಣರು ಮೀಸಲಾತಿಯ ಬಲಿಪಶುಗಳೇ?

ರಾಜೇಶ್ ಚಾವ್ಡರಾಜೇಶ್ ಚಾವ್ಡ6 Feb 2022 12:05 AM IST
share
ಬ್ರಾಹ್ಮಣರು ಮೀಸಲಾತಿಯ ಬಲಿಪಶುಗಳೇ?

ಭಾರತದಲ್ಲಿನ ಮೀಸಲಾತಿ ವ್ಯವಸ್ಥೆಯು ಬ್ರಾಹ್ಮಣರನ್ನು ಭಾರತದ ಹೊರಗಿನ ದೇಶಗಳಿಗೆ ತಳ್ಳಿದೆ ಎಂಬುದಾಗಿ ‘ದ ಎಕನಾಮಿಸ್ಟ್’ನ ಲೇಖಕರೊಬ್ಬರು ಹೇಳುತ್ತಾರೆ. ಆದರೆ, ಈ ಸುಳ್ಳಿಗಿಂತ ಬೇರೆಯದೇ ಆದ ಕತೆಯನ್ನು ಅಂಕಿ-ಸಂಖ್ಯೆಗಳು ಹೇಳುತ್ತಿವೆ.

ಭಾಗ-2


ರಾಜೇಶ್ ಚಾವ್ಡ ನಾನು ಗುಜರಾತ್‌ನ ಕಳಪೆ ನಿರ್ವಹಣೆಯ ಸರಕಾರಿ ಶಾಲೆಯೊಂದರಿಂದ ಭಾರತದ ಉನ್ನತ ಕಾನೂನು ಶಾಲೆಗೆ ಬಂದವನು. ನನ್ನ ಹೆಚ್ಚಿನ ‘ಮೇಲ್ಜಾತಿಯ’ ಸಹಪಾಠಿಗಳು ಉತ್ತಮ ಖಾಸಗಿ ಶಾಲೆಗಳಿಗೆ ಹೋದವರು, ಇಂಗ್ಲಿಷ್‌ನಲ್ಲಿ ಶಿಕ್ಷಣ ಪಡೆದವರು ಮತ್ತು ಮನೆಯಲ್ಲಿ ಪುಸ್ತಕಗಳ ಭಂಡಾರವನ್ನೇ ಹೊಂದಿದವರು. ಆದರೆ ನನ್ನ ಮನೆಯಲ್ಲಿ ಹಲವು ವರ್ಷಗಳ ಕಾಲ ವಿದ್ಯುತ್ ಕೂಡ ಇರಲಿಲ್ಲ. ನನ್ನ ಕುಟುಂಬದಲ್ಲಿ ನನ್ನ ತಂದೆ ಶಾಲೆಗೆ ಹೋದ ಮೊದಲಿಗರು. ಹೈಸ್ಕೂಲ್ ಶಿಕ್ಷಣ ಪಡೆದ ಬಳಿಕ ಅವರು ಕೃಷಿ ಕಾರ್ಮಿಕರಾಗಿ ಕೆಲಸ ಮಾಡಲು ಆರಂಭಿಸಿದರು. ನನ್ನ ತಾಯಿ ಮತ್ತು ಅಜ್ಜ-ಅಜ್ಜಿ ಶಾಲೆಗೆ ಹೋದವರೇ ಅಲ್ಲ. ಹಲವು ವರ್ಷಗಳ ಕಾಲ ನಮ್ಮ ಒಂದು ಕೋಣೆಯ ಮನೆಯಲ್ಲಿ ಶೌಚಾಲಯವೇ ಇರಲಿಲ್ಲ. ‘ಅಸ್ಪಶ್ಯರಿಗೆ’ 12 ಸೀಟುಗಳನ್ನು ಮೀಸಲಿಡುವ ಮೀಸಲಾತಿ ವ್ಯವಸ್ಥೆ ಇರದಿದ್ದರೆ ನನಗೆ ಎನ್‌ಎಲ್‌ಎಸ್‌ನಲ್ಲಿ ಕಲಿಯಲು ಸಾಧ್ಯವಾಗುತ್ತಿರಲಿಲ್ಲ.

1995ರಲ್ಲಿ, ಎನ್‌ಎಲ್‌ಎಸ್‌ನಲ್ಲಿ ಶೋಷಿತ ಜಾತಿಗಳು ಮತ್ತು ಪಂಗಡಗಳಿಗೆ ಮೀಸಲಿರಿಸಲಾದ 18 ಸ್ಥಾನಗಳಿಗೆ ಹೊರತಾಗಿ, ಹೆಚ್ಚುವರಿ 5 ಸೀಟುಗಳನ್ನು ವಿದೇಶಿ ವಿದ್ಯಾರ್ಥಿಗಳಿಗೆ ಮೀಸಲಿಡಲಾಯಿತು. ಭಾರತ ದಲ್ಲಿನ ಹೆಚ್ಚಿನ ವಿಶ್ವವಿದ್ಯಾನಿಲಯಗಳಲ್ಲಿ ಈ ಕೋಟ ಚಾಲ್ತಿಯಲ್ಲಿದೆ. ಆದರೆ ಈ ಮೀಸಲಾತಿಯ ಪ್ರಯೋಜನವನ್ನು ಸಾಮಾನ್ಯವಾಗಿ ವಿದೇಶಿ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ‘ಮೇಲ್ಜಾತಿಯ’ ಭಾರತೀಯರು ಪಡೆದುಕೊಳ್ಳುತ್ತಾರೆ.

ವಿದೇಶಗಳಲ್ಲಿರುವ ಭಾರತೀಯ ಸಮುದಾಯಗಳು ಮೇಲ್ಜಾತಿಯ ಭಾರತೀಯರಿಂದಲೇ ತುಂಬಿವೆ. ಅವರಲ್ಲಿ ಕಮಲಾ ಹ್ಯಾರಿಸ್‌ರ ತಾಯಿಯಂತೆ, ವಲಸೆ ಹೋಗಲು ಅಗತ್ಯವಾಗಿದ್ದ ಸಾಂಸ್ಕೃತಿಕ ಮತ್ತು ಆರ್ಥಿಕ ಬಂಡವಾಳಗಳಿದ್ದವು. ಅವುಗಳ ಪ್ರಯೋಜನವನ್ನು ಅವರು ಪಡೆದುಕೊಂಡರು. ಅದೂ ಅಲ್ಲದೆ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಮಾಡಬೇಕಾಗಿರುವಂತೆ, ಇವರು ಯಾವುದೇ ಪ್ರವೇಶ ಪರೀಕ್ಷೆಗೆ ಕುಳಿತುಕೊಳ್ಳಬೇಕಾಗಿಲ್ಲ; ಕೇವಲ ಅರ್ಜಿ ಸಲ್ಲಿಸಿದರೆ ಸಾಕು.

ಬೇರೆ ಮಾತುಗಳಲ್ಲಿ ಹೇಳುವುದಾದರೆ, ಪ್ರತಿಭೆಯ ಯಾವುದೇ ಪುರಾವೆಯಿಲ್ಲದೆ ಅವರನ್ನು ಒಳಗೆ ಸೇರಿಸಿಕೊಳ್ಳಲಾಗುತ್ತಿದೆ. ಮಹತ್ವದ ಶಿಕ್ಷಣ ಸಂಸ್ಥೆಗಳಲ್ಲಿ ‘ಅಸ್ಪಶ್ಯರ’ ಉಪಸ್ಥಿತಿಯನ್ನು ‘ಮೇಲ್ಜಾತಿಯ’ ಭಾರತೀಯರು ಟೀಕಿಸುತ್ತಾರೆ. ಯಾಕೆಂದರೆ, ಎನ್‌ಎಲ್‌ಎಸ್ ಮುಂತಾದ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಗಳಿಸುವ ಮಾನದಂಡಗಳಲ್ಲಿ ಅಸ್ಪಶ್ಯರಿಗಾಗಿ ಕೊಂಚ ರಿಯಾಯಿತಿಯನ್ನು ತೋರಿಸಲಾಗಿದೆ. ಆದರೆ, ಪ್ರತಿಭೆಯ ಲವಲೇಶವೂ ಇಲ್ಲದೆ ಇಂತಹ ಸಂಸ್ಥೆಗಳಿಗೆ ಪ್ರವೇಶ ಗಳಿಸುವ ತಮ್ಮದೇ ‘ಮೇಲ್ಜಾತಿ’ ಸಮುದಾಯಗಳ ಜನರತ್ತ ಇದೇ ‘ಮೇಲ್ಜಾತಿಯ’ ಜನರು ಒಂದು ಮಾತನ್ನೂ ಆಡುವುದಿಲ್ಲ.

‘ಅಧ್ಯಯನಶೀಲತೆ’ಯ ಪರಂಪರೆ ಬಗ್ಗೆ ‘ದ ಎಕನಾಮಿಸ್ಟ್’ ಉಲ್ಲೇಖಿಸುತ್ತದೆ. ಇದರಿಂದಾಗಿ ಬ್ರಾಹ್ಮಣರು ಪರೀಕ್ಷೆಗಳಲ್ಲಿ ಉತ್ತಮ ನಿರ್ವಹಣೆ ನೀಡಲು ಸಾಧ್ಯವಾಗಿದೆ ಎಂದು ಅದು ಹೇಳಿಕೊಳ್ಳುತ್ತದೆ. ಇದೇನೂ ಆಕಸ್ಮಿಕವಲ್ಲ. ಸಾವಿರಾರು ವರ್ಷಗಳಿಂದ ಭಾರತದ ಜಾತಿ ಆಧಾರಿತ ಶ್ರೇಣೀಕೃತ ವ್ಯವಸ್ಥೆಯ ತುತ್ತ ತುದಿಯಲ್ಲಿ ಆರಾಮವಾಗಿ ಕುಳಿತು ಸ್ಕಾಲರ್‌ಶಿಪ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದ ಕಾರಣದಿಂದ ಈ ಪರಂಪರೆ ಸಹಜವಾಗಿಯೇ ಬಂದಿದೆ.

ಅಂದರೆ ಇದರ ಅರ್ಥ ಭಾರತದಲ್ಲಿ ಲಭ್ಯವಿರುವ ಶೈಕ್ಷಣಿಕ ಅವಕಾಶಗಳ ಪೈಕಿ (ಉದ್ಯೋಗ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಅವಕಾಶಗಳ ಬಗ್ಗೆ ಹೇಳುವುದೇ ಬೇಡ) ಅನುಪಾತಕ್ಕಿಂತಲೂ ತುಂಬಾ ಅಧಿಕ ಪಾಲನ್ನು ಬ್ರಾಹ್ಮಣರು ಪಡೆದುಕೊಳ್ಳಬಹುದು ಹಾಗೂ ಅದನ್ನು ಈ ಅಸ್ಪಷ್ಟ ಪ್ರತಿಭೆಯ ಆಧಾರದಲ್ಲಿ ಸಮರ್ಥಿಸಿಕೊಳ್ಳಬಹುದು. ಮೀಸಲಾತಿ ನೀತಿಗಳು ಜಾರಿಯಲ್ಲಿರುವ ಹೊರತಾಗಿಯೂ ಭಾರತದಲ್ಲಿ ಇದು ನಡೆಯುತ್ತಿದೆ. ಇದಕ್ಕೆ ಶೋಷಿತ ಜಾತಿಗಳ ಜನರು ಹೆಚ್ಚಿನ ಬೆಲೆಯನ್ನು ತೆರಬೇಕಾಗಿದೆ. ತಲೆತಲಾಂತರದಿಂದ ತಮಗಾಗಿರುವ ಅನ್ಯಾಯಕ್ಕೆ ಪ್ರತಿಯಾಗಿ ಅವರು ಒಂದು ಶತಮಾನಕ್ಕಿಂತಲೂ ಕಡಿಮೆ ಅವಧಿಯ ಮೀಸಲಾತಿ ಸೌಲಭ್ಯವನ್ನು ಪಡೆದಿದ್ದಾರೆ.

ನಾನು ಕೊಲಂಬಿಯ ಕಾನೂನು ಶಾಲೆಯಲ್ಲಿ ಕಲಿತೆ. ಬಳಿಕ ಹಲವು ದೇಶಗಳ ಕಾರ್ಪೊರೇಟ್ ಕಾನೂನು ಕ್ಷೇತ್ರದಲ್ಲಿ ಕೆಲಸ ಮಾಡಿದೆ. 2004ರಲ್ಲಿ, ಗಾಂಧಿನಗರದಲ್ಲಿರುವ ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದ ಸ್ಥಾಪಕರಲ್ಲಿ ಒಬ್ಬನಾಗಲು ನನಗೆ ಆಹ್ವಾನ ಬಂತು. ನನ್ನನ್ನೊಳಗೊಂಡ ಆರು ಮಂದಿಯ ತಂಡವು ಈ ನಿಟ್ಟಿನಲ್ಲಿ ಕೆಲಸ ಮಾಡಿತು. ಭಾರತೀಯ ಸಾಲಿಸಿಟರ್ ಜನರಲ್, ಗುಜರಾತ್ ರಾಜ್ಯದ ಕಾನೂನು ಸಚಿವ, ಗುಜರಾತ್ ರಾಜ್ಯದ ಕಾನೂನು ಕಾರ್ಯದರ್ಶಿ, ವಿಶ್ವವಿದ್ಯಾನಿಲಯದ ನಿರ್ದೇಶಕರು, ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಮತ್ತು ನಾನು ಈ ತಂಡದಲ್ಲಿದ್ದವರು. ನನ್ನನ್ನು ಹೊರತುಪಡಿಸಿ ತಂಡದ ಇತರ ಸದಸ್ಯರೆಲ್ಲರೂ ಬ್ರಾಹ್ಮಣರು.

ಕೆಲವೇ ಅದೃಷ್ಟವಂತರ ಪೈಕಿ ನಾನೊಬ್ಬ. ಮೀಸಲಾತಿ ನಿಯಮ ಜಾರಿಯಲ್ಲಿದ್ದೂ, ಶೈಕ್ಷಣಿಕ ಅವಕಾಶಗಳನ್ನು ಪಡೆಯಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಒಂದರ ನಂತರ ಒಂದರಂತೆ ಬಂದ ವಿವಿಧ ಅಧ್ಯಯನಗಳು ಹೇಳುತ್ತಿವೆ.
ಕಲಿಕೆಯ ಹೆಚ್ಚಿನ ಪ್ರಮುಖ ಕ್ಷೇತ್ರಗಳಲ್ಲಿ, 2018-19ರ ಸಾಲಿನಲ್ಲಿ ದಲಿತ (ಎಸ್ಸಿ)ರ ನೋಂದಣಿಯು ನಿಗದಿತ 15 ಶೇ. ಕೋಟಾವನ್ನು ಮತ್ತು ಪರಿಶಿಷ್ಟ ಪಂಗಡ (ಎಸ್ಟಿ)ಗಳ ಅಭ್ಯರ್ಥಿಗಳ ನೋಂದಣಿಯು ನಿಗದಿತ ಶೇ. 7.5ನ್ನು ತಲುಪಿಲ್ಲ ಎಂಬುದಾಗಿ 2019ರಲ್ಲಿ ‘ಮಿಂಟ್’ ವರದಿ ಮಾಡಿತ್ತು. ಉತ್ತರಪ್ರದೇಶ, ಬಿಹಾರ, ತಮಿಳುನಾಡು ಮತ್ತು ಕೇರಳ ಸೇರಿದಂತೆ ಹಲವು ದೊಡ್ಡ ರಾಜ್ಯಗಳಲ್ಲಿ 2018-19ರ ಸಾಲಿನಲ್ಲಿ ಉನ್ನತ ಶಿಕ್ಷಣಕ್ಕಾಗಿ ನೋಂದಾಯಿಸಿಕೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ ಶೇ. 20ಕ್ಕಿಂತಲೂ ಕಡಿಮೆಯಾಗಿತ್ತು.

ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ (ಎಪಿಪಿಎಸ್‌ಸಿ) ಎಂಬ ಸಂಘಟನೆ ಭಾರತದ ಮಹತ್ವದ ಇಂಜಿನಿಯರಿಂಗ್ ಕಾಲೇಜುಗಳ ಪೈಕಿ ಒಂದಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮಾಹಿತಿ ಕೋರಿ ಅರ್ಜಿಯೊಂದನ್ನು ಸಲ್ಲಿಸಿತು. 2015 ಮತ್ತು 2019ರ ನಡುವಿನ ಅವಧಿಯಲ್ಲಿ 26 ಇಲಾಖೆಗಳ ಪೈಕಿ 11ರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಒಬ್ಬನೇ ಒಬ್ಬ ವಿದ್ಯಾರ್ಥಿಗೆ ಈ ಕಾಲೇಜು ಪ್ರವೇಶ ನೀಡಿಲ್ಲ ಎನ್ನುವ ಮಾಹಿತಿಯು ಅದಕ್ಕೆ ಲಭಿಸಿತು. ಏರೋಸ್ಪೇಸ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್, ಪರಿಸರ ಅಧ್ಯಯನ, ಗಣಿತ ಮುಂತಾದ ಇಲಾಖೆಗಳು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದ ಇಲಾಖೆಗಳಲ್ಲಿ ಸೇರಿವೆ. ಈ ಸುದ್ದಿಯು 2020 ಡಿಸೆಂಬರ್ 8ರ ‘ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಜೊತೆಗೆ, ಈ ಐದು ವರ್ಷಗಳ ಅವಧಿಯಲ್ಲಿ 8,827 ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳು ಅರ್ಜಿ ಹಾಕಿದ್ದು, ಅವರ ಪೈಕಿ ಕೇವಲ 216 ಮಂದಿಗೆ ಪ್ರವೇಶ ನೀಡಲಾಗಿದೆ. ಮೂರು ಇಲಾಖೆಗಳು ಕೇವಲ ತಲಾ ಒಬ್ಬ ಪರಿಶಿಷ್ಟ ಜಾತಿ ವಿದ್ಯಾರ್ಥಿಗೆ ಪ್ರವೇಶ ನೀಡಿವೆ ಹಾಗೂ ಎರಡು ಇಲಾಖೆಗಳು ಪರಿಶಿಷ್ಟ ಜಾತಿಯ ಯಾವುದೇ ವಿದ್ಯಾರ್ಥಿಗೆ ಪ್ರವೇಶ ನೀಡಿಲ್ಲ. ಕಳೆದ ಐದು ವರ್ಷಗಳ ಅವಧಿಯಲ್ಲಿ, ಅರ್ಜಿ ಸಲ್ಲಿಸಿದ ಒಟ್ಟು 1,522 ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಪೈಕಿ ಕೇವಲ 47 ಮಂದಿಗೆ ಪ್ರವೇಶ ನೀಡಲಾಗಿದೆ.

2018 ಮತ್ತು 2021ರ ನಡುವಿನ ಅವಧಿಯಲ್ಲಿ ದಿಲ್ಲಿ ಐಐಟಿಯ ಪಿಎಚ್‌ಡಿ ಪ್ರವೇಶಕ್ಕೆ ಸಂಬಂಧಿಸಿ ‘ಇಗಾಲಿಟೇರಿಯನ್ಸ್’ ಎಂಬ ಸಂಘಟನೆಯು ಪಡೆದ ಆರ್‌ಟಿಐ ಮಾಹಿತಿಯೂ ಇದೇ ಕತೆಯನ್ನು ಹೇಳಿದೆ. ಈ ಮಾಹಿತಿಯ ಪ್ರಕಾರ, ದಿಲ್ಲಿ ಐಐಟಿಯಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ವಿಭಾಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ನೀಡಲಾಗಿರುವ ಪ್ರವೇಶವು ಮೀಸಲಾತಿ ನೀತಿ ಅಡಿಯಲ್ಲಿ ಅವರಿಗೆ ಲಭಿಸಬೇಕಾಗಿದ್ದ ಪ್ರಮಾಣಕ್ಕಿಂತ ತುಂಬಾ ಕಡಿಮೆಯಾಗಿತ್ತು.

ಬ್ರಾಹ್ಮಣರು ಮೀಸಲಾತಿ ವ್ಯವಸ್ಥೆಯ ಬಲಿಪಶುಗಳಾಗಿದ್ದಾರೆ ಎಂಬ ಸುಳ್ಳಿಗಿಂತ ಬೇರೆಯದೇ ಆದ ಕತೆಯನ್ನು ಇಂತಹ ಅಂಕಿ-ಸಂಖ್ಯೆಗಳು ನಮಗೆ ಹೇಳುತ್ತವೆ. ಇಂತಹ ಮಾಹಿತಿಗಳನ್ನು ಅಧಿಕಾರಶಾಹಿ ವ್ಯವಸ್ಥೆಯಿಂದ ಪಡೆದುಕೊಳ್ಳುವುದು ತುಂಬಾ ಕಷ್ಟ ಎನ್ನುವುದು ಎಲ್ಲರಿಗೂ ಗೊತ್ತಿದೆ. ಕೊನೆಗೂ ಪ್ರಯಾಸದಿಂದ ಪಡೆದ ಇಂತಹ ಅಂಕಿ-ಅಂಶಗಳು, ತನ್ನಿಂತಾನೆ ಕಲಿಯುವ ಅವಕಾಶವನ್ನು ಯಾರು ಪಡೆಯುತ್ತಾರೆ, ಕೇವಲ ಮೀಸಲಾತಿ ವ್ಯವಸ್ಥೆಯಿಂದ ಕಲಿಯುವ ಅವಕಾಶವನ್ನು ಯಾರು ಪಡೆಯುತ್ತಾರೆ ಮತ್ತು ಮೀಸಲಾತಿ ವ್ಯವಸ್ಥೆಯು ಜಾರಿಯಲ್ಲಿದ್ದೂ ಯಾರು ಕಲಿಯುವ ಅವಕಾಶ ವನ್ನು ಪಡೆಯುವುದಿಲ್ಲ ಎಂಬ ಭಯಾನಕ ಕತೆಯೊಂದನ್ನು ಹೇಳುತ್ತವೆ.

ಭಾರತವನ್ನು ಕಟ್ಟುವ ಅವಕಾಶವನ್ನು ಯಾರು ಪಡೆಯುತ್ತಾರೆ, ಅದರ ಕಾನೂನುಗಳನ್ನು ರೂಪಿಸುವ ಅವಕಾಶವನ್ನು ಯಾರು ಪಡೆಯುತ್ತಾರೆ, ನೀತಿಗಳನ್ನು ರೂಪಿಸುವ ಅವಕಾಶವನ್ನು ಯಾರು ಪಡೆಯುತ್ತಾರೆ ಹಾಗೂ ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮ ಕತೆಗಳನ್ನು ಹೇಳುವ ಅವಕಾಶವನ್ನು ಯಾರು ಪಡೆಯುತ್ತಾರೆ ಎನ್ನುವುದನ್ನು ಹೇಳುವ ಕತೆಯೂ ಇದಾಗಿದೆ.
ಬೇರೆ ಮಾತುಗಳಲ್ಲಿ ಹೇಳುವುದಾದರೆ, ಹೆಚ್ಚಿನ ಭಾರತೀಯ ಕಂಪೆನಿಗಳ ನೇತೃತ್ವವನ್ನು ಬ್ರಾಹ್ಮಣರು ವಹಿಸಲು ಏನು ಕಾರಣವೋ, ಅವರು ಪಾಶ್ಚಾತ್ಯ ಕಂಪೆನಿಗಳ ನೇತೃತ್ವವನ್ನು ವಹಿಸಲೂ ಇದೇ ಕಾರಣವಾಗಿದೆ. ಭಾರತದಲ್ಲಿರಲಿ, ವಿದೇಶಗಳಲ್ಲಿರಲಿ, ಅವಕಾಶಗಳ ಸದುಪಯೋಗವನ್ನು ಪಡೆಯುವ ಉತ್ತಮ ಸ್ಥಿತಿಯಲ್ಲಿ ಅವರಿದ್ದಾರೆ.
ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ, ನನ್ನನ್ನು ಕಾನೂನು ಶಾಲೆಗೆ ಕರೆತಂದಿರುವ ಮೀಸಲಾತಿ ವ್ಯವಸ್ಥೆ ಇರದಿದ್ದರೆ ನಿಮಗೆ ಈ ಲೇಖನ ಓದಲು ಸಿಗುತ್ತಿರಲಿಲ್ಲ!

ಕೃಪೆ: thewire.in 

share
ರಾಜೇಶ್ ಚಾವ್ಡ
ರಾಜೇಶ್ ಚಾವ್ಡ
Next Story
X