ಕಸಾಪ ಸಾಹಿತ್ಯ ಪರೀಕ್ಷೆಗಳ ದಿನಾಂಕ ಪ್ರಕಟ
ಬೆಂಗಳೂರು, ಫೆ. 5: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆಸುವ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳನ್ನು ಫೆ.18ರಿಂದ ಫೆ.20ರವರೆಗೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪರೀಕ್ಷೆಗಳನ್ನು ರಾಜ್ಯದ 19 ಕೇಂದ್ರಗಳಲ್ಲಿ ನಡೆಸಲಾಗಿದ್ದು, ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಪರಿಷ್ಕøತ ವೇಳಾಪಟ್ಟಿಯನ್ನು ಅಂಚೆಯ ಮೂಲಕ ಕಳುಹಿಸಲಾಗಿದೆ. ಫೆ.10 ನಂತರವೂ ವೇಳಾಪಟ್ಟಿಯು ತಲುಪದಿದ್ದರೆ, ವಿದ್ಯಾರ್ಥಿಗಳು ಕಸಾಪದ ಕಾರ್ಯದರ್ಶಿಯನ್ನು ದೂರವಾಣಿ ಸಂಖ್ಯೆ 080-26623584/ 26612991 ಗೆ ಸಂಪರ್ಕಿಸುವಂತೆ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್ಜಾಲ http://www.kasapa.in ಗೆ ಸಂಪರ್ಕಿಸಬಹುದಾಗಿದೆ.
Next Story





