ಯು-19 ಕ್ರಿಕೆಟ್ ವಿಶ್ವಕಪ್ ಗೆದ್ದ ತಂಡದ ಪ್ರತಿ ಆಟಗಾರರಿಗೆ 40 ಲಕ್ಷ ರೂ. ಬಹುಮಾನ: ಬಿಸಿಸಿಐ

(ಫೋಟೊ : Twitter)
ಮುಂಬೈ: ಇಂಗ್ಲೆಂಡ್ ತಂಡವನ್ನು ಮಣಿಸಿ ದಾಖಲೆ ಐದನೇ ಬಾರಿಗೆ ಯು-19 ಕ್ರಿಕೆಟ್ ವಿಶ್ವಕಪ್ ಗೆದ್ದುಕೊಂಡ ಭಾರತೀಯ ತಂಡದ ಪ್ರತಿ ಆಟಗಾರರಿಗೆ ತಲಾ 40 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯರ್ಶಿ ಜಯ್ ಶಾ ಘೋಷಿಸಿದ್ದಾರೆ. ಅಂತೆಯೇ ತಂಡದ ಎಲ್ಲ ಬೆಂಬಲ ಸಿಬ್ಬಂದಿಗೆ ತಲಾ 25 ಲಕ್ಷ ರೂಪಾಯಿ ಬಹುಮಾನ ಪ್ರಕಟಿಸಿದ್ದಾರೆ.
"ಯು-19 ಕ್ರಿಕೆಟ್ ವಿಶ್ವಕಪ್ ಫೈನಲ್ನಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತೀಯ ತಂಡದ ಪ್ರತಿ ಆಟಗಾರರಿಗೆ ತಲಾ 40 ಲಕ್ಷ ಹಾಗೂ ಬೆಂಬಲ ಸಿಬ್ಬಂದಿಗೆ ತಲಾ 25 ಲಕ್ಷ ಬಹುಮಾನ ಘೋಷಿಸಲು ಅತೀವ ಸಂತಸವಾಗುತ್ತಿದೆ. ನೀವು ಭಾರತ ಹೆಮ್ಮೆಪಡುವಂಥ ಸಾಧನೆ ಮಾಡಿದ್ದೀರಿ" ಎಂದು ಶಾ ಟ್ವೀಟ್ ಮಾಡಿದ್ದಾರೆ.
ಯಶ್ ಧುಲ್ ನೇತೃತ್ವದ ತಂಡ ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ನಾಲ್ಕು ವಿಕೆಟ್ಗಳಿಂದ ಮಣಿಸಿದೆ. ಇದಕ್ಕೂ ಮುನ್ನ ಭಾರತ 2000, 2008, 2012 ಮತ್ತು 2018ರಲ್ಲಿ ಪ್ರಶಸ್ತಿ ಜಯಿಸಿತ್ತು.
ಬಿಸಿಸಿಐ ಖಜಾಂಚಿ ಅರುಣ್ ಧಮಾಲ್ ಕೂಡಾ ತಂಡದ ಸಾಧನೆಯನ್ನು ಟ್ವೀಟ್ ಮೂಲಕ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇಡೀ ಟೂರ್ನಿಯುದ್ದಕ್ಕೂ ತಂಡದ ಪ್ರದರ್ಶನ ಅಮೋಘ. ರಜನ್ ಗಡ ಬವಾ, ರವಿ ಕುಮಾರ್, ಶೇಕ್ ರಶೀದ್ ಮತ್ತು ನಿಶಾಂತ್ ಸಿಂಧು ಅದ್ಭುತ ಆಟವಾಡಿದ್ದೀರಿ ಎಂದು ಅವರು ಬಣ್ಣಿಸಿದ್ದಾರೆ.
Congratulations #BoysInBlue on winning the @ICC U19 World Cup. This is a Very Very Special @VVSLaxman281 win against all odds. Each of our youngsters has shown the heart and temperament needed to make history in these trying times #INDvENG #U19CWCFinal pic.twitter.com/amuzSbarbc
— Jay Shah (@JayShah) February 5, 2022
I’m pleased to announce the reward of 40 lacs per player and 25 lacs per support staff for the U19 #TeamIndia contingent for their exemplary performance in #U19CWCFinal. You have made proud. @SGanguly99 @ThakurArunS @ShuklaRajiv
— Jay Shah (@JayShah) February 5, 2022