ಪಂಜಾಬ್ ಸಿಎಂ ಅಭ್ಯರ್ಥಿ ವಿಚಾರ: ಎಲ್ಲರೂ ರಾಹುಲ್ ಗಾಂಧಿಯವರ ನಿರ್ಧಾರಕ್ಕೆ ಬದ್ಧ ಎಂದ ಸಿಧು

ಚಂಡಿಗಡ: ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲು ಸಿದ್ಧವಾಗಿದೆ. ರವಿವಾರ ಪಂಜಾಬ್‌ನ ಲೂಧಿಯಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಘೋಷಣೆ ಮಾಡಲಿದ್ದಾರೆ.
ಈ ಘೋಷಣೆಗೂ ಮುನ್ನ ರವಿವಾರ ಬೆಳಿಗ್ಗೆ ಟ್ವೀಟ್ ಮಾಡಿದ ಸಿಎಂ ಹುದ್ದೆಗೆ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರಾದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ರಾಹುಲ್ ಗಾಂಧಿಯವರ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗುತ್ತಾರೆ ಎಂದು ಹೇಳಿದ್ದಾರೆ.
“ನಿರ್ಧಾರದ ಕ್ರಿಯೆಯಿಲ್ಲದೆ ಮಹತ್ವದ್ದನ್ನು ಸಾಧಿಸಲು ಸಾಧ್ಯವಿಲ್ಲ. ಸ್ಪಷ್ಟನೆ ನೀಡಲು ಪಂಜಾಬ್ ಗೆ ಆಗಮಿಸುತ್ತಿರುವ ನಮ್ಮ ನಾಯಕ ರಾಹುಲ್ ಗಾಂಧಿಗೆ ಆತ್ಮೀಯ ಸ್ವಾಗತ. ಎಲ್ಲರೂ ಅವರ ನಿರ್ಧಾರವನ್ನು ಗೌರವಿಸಲಿದ್ದಾರೆ" ಎಂದು ಸಿಧು ಟ್ವೀಟಿಸಿದರು.
ಶನಿವಾರ 'ಇಂಡಿಯಾ ಟುಡೇ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ನವಜೋತ್ ಸಿಂಗ್ ಸಿಧು, "ನಾನು ರಾಜಕೀಯಕ್ಕೆ ಬಂದಿರುವುದು ವಿಷಯಗಳನ್ನು ಬದಲಾಯಿಸಲು. ಯಾವುದೇ ಸ್ಥಾನಕ್ಕಾಗಿ ಅಲ್ಲ. ಪಕ್ಷದ ಹೈಕಮಾಂಡ್‌ನ ಆಶಯ ನನಗೆ ಆಜ್ಞೆಯಾಗಿದೆ. ಮುಖ್ಯಮಂತ್ರಿಯಾಗಲಿ, ಇಲ್ಲದಿರಲಿ ಕೊನೆಯ ಉಸಿರು ಇರುವವರೆಗೂ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ'' ಎಂದು ಹೇಳಿದರು.
Nothing great was ever achieved without an act of decision …. Warm welcome to our leading light Rahul Ji , who comes to give clarity to Punjab …. All will abide by his decision !!!
— Navjot Singh Sidhu (@sherryontopp) February 6, 2022







