ಪಡುಪೆರಾರ ಗ್ರಾಪಂನಿಂದ ಸ್ವಚ್ಛತಾ ಅಭಿಯಾನ

ಮಂಗಳೂರು : ಪಡುಪೆರಾರ ಗ್ರಾಪಂ ವ್ಯಾಪ್ತಿಯ ಕಜೆಪದವುನಿಂದ ಬಜ್ಪೆಯತ್ತ ಸುಮಾರು ಎರಡು ಕಿಮೀ ರಸ್ತೆಯ ಎರಡೂ ಪಾರ್ಶ್ವದಲ್ಲಿ ರಾಶಿ ಬಿದ್ದಿದ್ದ ಲೋಡ್‌ಗಟ್ಟೆಲೆ ತ್ಯಾಜ್ಯವನ್ನು ಪಂಚಾಯತ್ ವತಿಯಿಂದ ಸ್ಥಳೀಯ ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ಗ್ರಾಮಸ್ಥರು ರವಿವಾರ ಸ್ವಚ್ಛಗೊಳಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಅಮಿತಾ ಶೆಟ್ಟಿ, ಪಿಡಿಒ ಉಗ್ಗಪ್ಪ ಮೂಲ್ಯ ನೇತೃತ್ವದಲ್ಲಿ ನಡೆದ ‘ಸ್ವಚ್ಛತಾ ಅಭಿಯಾನ’ದಲ್ಲಿ ಗ್ರಾಪಂ ಸದಸ್ಯ ಅರುಣ್ ಕೋಟ್ಯಾನ್, ಕ್ಲಬ್‌ನ ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ಕುಮಾರ್, ಕಾರ್ಯದರ್ಶಿ ಮೋಹನ್ ಮತ್ತಿತರರು ಭಾಗವಹಿಸಿದ್ದರು.
Next Story