ಇರಾ: ತಾಜುಲ್ ಉಲಮಾ ಮಸೀದಿ ಉದ್ಘಾಟನೆ

ಮಂಗಳೂರು, ಫೆ.6: ಇರಾ ಗ್ರಾಮದ ಕಾಪಿಕಾಡ್ ಸಮೀಪದ ಕುಕ್ಕಾಜೆಯಲ್ಲಿ ನೂತನವಾಗಿ ನಿರ್ಮಿಸಲಾದ ತಾಜುಲ್ ಉಲಮಾ ಮಸೀದಿಯನ್ನು ಉದ್ಘಾಟಿಸಲಾಯಿತು.
ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಝೈನುಲ್ ಉಲಮಾ ಅಲ್ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಮಸೀದಿಯನ್ನು ಉದ್ಘಾಟಿಸಿದರು. ಕೇರಳದ ಕುಟ್ಯಾಡಿ ಸಿರಾಜುಲ್ ಹುದಾ ಸಂಸ್ಥೆಯ ಸ್ಥಾಪಕಾಧ್ಯಕ್ಷ ಶೈಖುನಾ ಪೆರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಮುಖ್ಯಭಾಷಣಗೈದರು.
ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಚಟ್ಟಕ್ಕಲ್ ಅಧ್ಯಕ್ಷತೆ ವಹಿಸಿದ್ದರು. ಅಸ್ಸಯ್ಯಿದ್ ಇಬ್ರಾಹಿಂ ಪೂಕುಂಞಿ ತಂಙಳ್ ದುಆಗೈದರು. ವಿಧಾನಸಭೆಯಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಮತ್ತು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿದರು.
ಅಸ್ಸಯ್ಯಿದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ತಲಕ್ಕಿ, ಅಸ್ಸಯ್ಯಿದ್ ಹಾಮಿದ್ ಅಲ್ ಹಾದಿ ತಂಙಳ್ ಮಂಜೇಶ್ವರ, ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ, ಅಸ್ಸಯ್ಯಿದ್ ಜಾಬಿರ್ ಬಾಹಸನ್ ತಂಙಳ್ ಆಲೂರು, ಖಾದಿಮುಲ್ ಮರ್ಕಝ್ ಹಸನ್ ಮುಸ್ಲಿಯಾರ್ ಕುಕ್ಕಾಜೆ, ಸ್ಥಳದಾನಿ ಅಬ್ಬಾಸ್ ಕಾಪಿಕಾಡ್, ಮಾಜಿ ಸಚಿವ ರಮಾನಾಥ ರೈ, ಬಂಟ್ವಾಳ ತಾಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಜಿಪಂ ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್, ತಾಪಂ ಮಾಜಿ ಸದಸ್ಯ ಅಬ್ಬಾಸ್ ಅಲಿ, ಪುರಸಭಾ ಸದಸ್ಯ ಅಬೂಬಕರ್ ಸಿದ್ದೀಕ್, ಇರಾ ಗ್ರಾಪಂ ಉಪಾಧ್ಯಕ್ಷ ಮೊಯಿದ್ದೀನ್ ಕುಂಞಿ, ಪರಪ್ಪುಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಎಂ.ಬಿ.ಉಮರ್, ಕೃಷ್ಣಾಪುರ ಜಮಾಅತ್ ಅಧ್ಯಕ್ಷ ಮಮ್ತಾಝ್ ಅಲಿ, ಪೀಯೂಶ್ ರಾಡ್ರಿಗಸ್, ಪದ್ಮನಾಭ ಕಾಜವ, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ ಉಪಸ್ಥಿತರಿದ್ದರು.
ತಾಜುಲ್ ಉಲಮಾ ಸುನ್ನಿ ಸೆಂಟರ್ ಸದಸ್ಯ ಮಹ್ಮೂದ್ ಸಅದಿ ಸ್ವಾಗತಿಸಿದರು. ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ವಂದಿಸಿದರು. ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.