ಸಂತ ಆಂತೋನಿ ಆಶ್ರಮದಲ್ಲಿ ಪುಣ್ಯ ಸ್ಮರಣಿಕೆಗಳ ಹಬ್ಬದ ನೊವೆನಾಕ್ಕೆ ಚಾಲನೆ

ಮಂಗಳೂರು, ಫೆ.6: ನಗರದಜೆಪ್ಪು ಸಂತ ಆಂತೋನಿ ಆಶ್ರಮದ ವತಿಯಿಂದ ನಡೆಯುತ್ತಿರುವ ಪುಣ್ಯ ಸ್ಮರಣಿಕೆ ಗಳ ಹಬ್ಬದ ನವ ದಿನಗಳ ನೊವೆನಾ ಕಾರ್ಯಕ್ರಮಕ್ಕೆ ರವಿವಾರ ಮಿಲಾಗ್ರಿಸ್ ಚರ್ಚ್‌ನ ಆವರಣದಲ್ಲಿ ಮಂಗಳೂರು ಧರ್ಮಪ್ರಾಂತದ ಶ್ರೇಷ್ಟ ಧರ್ಮಗುರು ಮೊನ್ಸಿಂಜೊರ್ ಮ್ಯಾಕ್ಸಿಂ ನೊರೊನ್ಹಾ ಚಾಲನೆ ನೀಡಿದರು.
ಈ ಬಳಿಕ ಬಲಿಪೂಜೆ ಅರ್ಪಿಸಿ ಪ್ರವಚನ ನೀಡಿದರು. ಸಂತ ಆಂತೋನಿಯವರ ಪ್ರತಿಮೆಯನ್ನು ಮೆರವಣಿಗೆಯಲ್ಲಿ ತಂದು ಪೀಠದಲ್ಲಿ ಇಟ್ಟು ಹೂ ಹಾರ ಹಾಕಿ ಗೌರವಿಸಲಾಯಿತು. ಸ್ವರಾಂಜಲಿ ಮ್ಯೂಸಿಕ್ ಸ್ಕೂಲ್‌ನ ಸದಸ್ಯರು ಗೀತೆಗಳನ್ನು ಹಾಡಿ ಬಲಿಪೂಜೆಯಲ್ಲಿ ಭಾಗವಹಿಸಲು ಸಹಕರಿಸಿದರು. ಸಂಸ್ಥೆಯ ನಿಯೋಜಿತ ನಿರ್ದೇಶಕ ಫಾ.ಜೆ.ಬಿ.ಕ್ರಾಸ್ತ ಮೊದಲ ದಿನದ ನೊವೆನಾ ಪ್ರಾರ್ಥನೆ ನಡೆಸಿಕೊಟ್ಟರು.
Next Story