ಆರ್ಸೊ ಕೊಂಕಣಿ ಮಾಸಿಕ, ಕಿಟಾಳ್ ಅಂತರ್ಜಾಲ ಪತ್ರಿಕೆಯ ವಾರ್ಷಿಕೋತ್ಸವ

ಮಂಗಳೂರು, ಫೆ.6: ಆರ್ಸೊ ಕೊಂಕಣಿ ಮಾಸಿಕ ಮತ್ತು ಕಿಟಾಳ್ ಅಂತರ್ಜಾಲ ಪತ್ರಿಕೆಯ 5ನೆ ವಾರ್ಷಿಕೋತ್ಸ ವವು ಶನಿವಾರ ನಗರದ ಜೆಪ್ಪುಬೋದಿ ಟ್ರೀಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಚನಾ (ಕಥೊಲಿಕ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ) ಅಧ್ಯಕ್ಷ ವಿನ್ಸೆಂಟ್ ಕುಟಿನ್ಹಾ ಆಧುನಿಕ ತಂತ್ರಜ್ಞಾನದಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಣನೀಯ ಬೆಳವಣಿಗೆ ಆಗಿದೆ. ಮಾಧ್ಯಮಗಳು ಔದ್ಯೋಗಿಕ ಜೀವನದ ಅವಿಭಾಜ್ಯ ಅಂಗವಾಗಿವೆ. ಹಾಗಾಗಿ ಮಾಧ್ಯಮಗಳು ಪತ್ರಿಕಾ ಧರ್ಮವನ್ನು ಮರೆಯದೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪೂರಕ ವಾತಾವರಣವನ್ನು ನಿರ್ಮಿಸುವ ಕೆಲಸ ಮಾಬೇಕು ಎಂದು ಹೇಳಿದರು.
ಚಿಂತಕ ಟೈಟಸ್ ನೊರೊನ್ಹಾ, ಉದ್ಯಮಿ ರೋಹನ್ ಮೊಂತೇರೊ, ಕಾರ್ಪೊರೇಟರ್ ನವೀನ್ ಆರ್. ಡಿಸೊಜ, ಕೊಂಕಣಿ ಟೋಸ್ಟ್ ಮಾಸ್ಟರ್ ಇಂಟರ್ ನ್ಯಾಶನಲ್ ಕ್ಲಬ್ ಅಧ್ಯಕ್ಷಿ ಜೀತಾ ಲೋಬೊ, ಕವಿ ಮೆಲ್ವಿನ್ ರೊಡ್ರಿಗಸ್, ಕಲಾಸಂರಕ್ಷಕ/ಸಮೀಕ್ಷಕ ವಿಲಿಯಮ್ ಫಾಯ್ಸ್, ಕಲಾವಿದ ಎಡ್ಡಿ ಸಿಕ್ವೇರಾ, ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆಯ ಅಧ್ಯಕ್ಷ ರೊನಾಲ್ಡ್ ಜೆ. ಸಿಕ್ವೇರಾ ಮತ್ತಿತರರು ಭಾಗವಹಿಸಿದ್ದರು.
ಆರ್ಸೊ ಪತ್ರಿಕೆಯ ಸಂಪಾದಕ ವಿಲ್ಸನ್ ಕಟೀಲ್ ಸ್ವಾಗತಿಸಿದರು. ಕಿಟಾಳ್ ಅಂತರ್ಜಾಲ ಪತ್ರಿಕೆಯ ಸಂಪಾದಕ ಎಚ್ಚೆಮ್ ಪೆರ್ನಾಲ್ ವಂದಿಸಿದರು.