ಎಸ್‌ವೈಎಸ್ ಕಿನ್ಯ ಸೆಂಟರ್ ವತಿಯಿಂದ 'ಕ್ಲಾಸ್ ರೂಮ್' ಕಾರ್ಯಕ್ರಮ

ಮಂಗಳೂರು, ಫೆ.6: ಸುನ್ನಿ ಯುವಜನ ಸಂಘದ ರಾಜ್ಯ ಸಮಿತಿಯ ನಿರ್ದೇಶನದಂತೆ ಕಿನ್ಯ ಸೆಂಟರ್ ವತಿಯಿಂದ 'ಕ್ಲಾಸ್ ರೂಮ್' ಕಾರ್ಯಕ್ರಮವು ನಡೆಯಿತು.
ಸೆಂಟರ್ ಅಧ್ಯಕ್ಷ ಹಾಜಿ ಬಿ.ಎಂ. ಇಸ್ಮಾಯಿಲ್ ಪರಮಾಂಡ ಅಧ್ಯಕ್ಷತೆ ವಹಿಸಿದ್ದರು. ಕ್ಲಾಸ್ ರೂಮ್ ಸಮಿತಿಯ ಉಪಾಧ್ಯಕ್ಷ ಸೈಯದ್ ಶಿಹಾಬುದ್ದೀನ್ ತಂಙಳ್ ಅಲ್ ಬುಖಾರಿ ದುಆಗೈದರು.
ಕೆಸಿಎಫ್ ಸೌದಿ ಅರೇಬಿಯಾ ಜಿದ್ದಾ ಝೋನ್ ಸಮಿತಿಯ ಅಧ್ಯಕ್ಷ ಇಬ್ರಾಹೀಂ ಖಲೀಲ್ ಕ್ಲಾಸ್ ರೂಮ್ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸಮಿತಿ ಸಂಘಟನಾ ನಾಯಕ ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ 'ಕ್ಲಾಸ್ ರೂಮ್' ನಡೆಸಿಕೊಟ್ಟರು.
ದ.ಕ. ಜಿಲ್ಲಾ ಸಮಿತಿ ವೆಸ್ಟ್ ಅಧ್ಯಕ್ಷ ಅಶ್‌ಅರಿಯ್ಯ ಮುಹಮ್ಮದ್ ಅಲಿ ಸಖಾಫಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್, ಸೆಂಟರ್ ದಅ್ವಾ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಸಖಾಫಿ, ಸಾಂತ್ವನ ಕಾರ್ಯದರ್ಶಿ ಇಸ್ಮಾಯಿಲ್ ಮೀಂಪ್ರಿ, ಸೋಶಿಯಲ್ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಸಾಮಣಿಗೆ ಹಾಗೂ ಸೆಂಟರ್ ಮತ್ತು ಏಳು ಬ್ರಾಂಚ್ ಸಮಿತಿಗಳ ನಾಯಕರು ಉಪಸ್ಥಿತರಿದ್ದರು.
ಸೆಂಟರ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಇಸ್ಮಾಈಲ್ ಸಾಗ್ ಸ್ವಾಗತಿಸಿದರು. ಕೋಶಾಧಿಕಾರಿ ಪಿ.ಎಂ. ಉಸ್ಮಾನ್ ಝುಹ್ರಿ ಕುರಿಯ ವಂದಿಸಿದರು.