Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ7 Feb 2022 12:05 AM IST
share
ಓ ಮೆಣಸೇ...

ನಮ್ಮ ನಾಯಕರ ತ್ಯಾಗ ಬಲಿದಾನ ನಮ್ಮ ಶಕ್ತಿ-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
 ಅವರನ್ನೆಲ್ಲ ಜಾತ್ರೆಯಲ್ಲಿನ ಕೋಳಿ ಕುರಿಗಳ ಸ್ಥಾನದಲ್ಲಿ ನಿಲ್ಲಿಸಿ ಬಿಟ್ಟಿರಲ್ಲಾ !


ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ಸೇರಿ ಹೊಸ ಪಕ್ಷ ಕಟ್ಟಲು ನನ್ನಲ್ಲಿ ಲೂಟಿ ಮಾಡಿದ ಹಣವಿಲ್ಲ- ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಅದಕ್ಕೆ ಕದ್ದ ಸಂಪತ್ತು ಸಾಕಾಗುವುದಿಲ್ಲವೇ?


ಬಿಜೆಪಿಯ ತತ್ವ ಮತ್ತು ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬಂದಂತಹ ವ್ಯಕ್ತಿ ನಾನು- ಎಂ.ಪಿ.ರೇಣುಕಾಚಾರ್ಯ, ಶಾಸಕ
 ನೀವು ಇಳಿದಿರುವ ಮಟ್ಟ ನೋಡಿದವರಿಗೆ ಆ ಬಗ್ಗೆ ಅನುಮಾನವೇನಿಲ್ಲ.


ಮಹಾತ್ಮಾ ಗಾಂಧಿಯ ಆದರ್ಶಗಳು ಭಾರತದ ಆಧಾರ ಸ್ತಂಭಗಳು- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಆದರೆ ಕರ್ನಾಟಕದಲ್ಲಿ ಮಾತ್ರ ಸರಕಾರಕ್ಕೆ ಎಲ್ಲ ವಿಷಯದಲ್ಲೂ ಗೋಡ್ಸೆಯೇ ಆದರ್ಶ.


50 ವರ್ಷದ ರಾಜಕೀಯದಲ್ಲಿ ನಾನು ಏನೂ ಮಾಡಿಕೊಂಡಿಲ್ಲ, ನಾನು ಬಡವ- ಸಿ.ಎಂ.ಇಬ್ರಾಹೀಂ, ಕೇಂದ್ರದ ಮಾಜಿ ಸಚಿವ
ಈ ದೇಶದಲ್ಲಿ ಯಾವ ಬಡವನಿಗೆ ನಲ್ವತ್ತು ಕೋಟಿ ಸಾಲ ಸಿಕ್ಕಿದೆ? ನಿಮ್ಮದು, ನಿಜಕ್ಕೂ ದಾಖಲೆ.


ಭ್ರಷ್ಟಾಚಾರವೆಂಬ ಗೆದ್ದಲಿನಿಂದ ದೇಶವನ್ನು ಮುಕ್ತ ಮಾಡಲು ಜನರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು- ನರೇಂದ್ರ ಮೋದಿ, ಪ್ರಧಾನಿ
 ಗೆದ್ದಲನ್ನು ಓಡಿಸಲು ಗೆದ್ದಲಿನಿಂದ ಮಾತ್ರ ಸಾಧ್ಯ ಎಂಬ ನಂಬಿಕೆಯಿಂದ ಪ್ರೇರಣೆ ಪಡೆದಿರಾ?

ವಿಧಾನಸಭೆ ಚುನಾವಣೆಯ ಬಳಿಕ ಗೋವಾದ ಗಣಿಗಾರಿಕೆ ಉದ್ಯಮವು ಎರಡು ಪಟ್ಟು ವೇಗದಲ್ಲಿ ಪುನಾರಂಭವಾಗಲಿದೆ- ಅಮಿತ್ ಶಾ, ಕೇಂದ್ರ ಸಚಿವ
ಅಲ್ಲಿ ಸೋತರೆ ಗಣಿ ದರೋಡೆಗೆ ಬೇರೆ ಜಾಗವನ್ನು ಈಗಲೇ ಹುಡುಕಿಟ್ಟುಕೊಳ್ಳಿ.

ಸಿದ್ದರಾಮಯ್ಯ ಮತ್ತು ಡಿಕೆಶಿ ಎಣ್ಣೆ-ನೀರು ಇದ್ದ ಹಾಗೆ, ಅವರು ಒಂದಾಗಲು ಸಾಧ್ಯವೇ ಇಲ್ಲ- ಗೋವಿಂದ ಕಾರಜೋಳ, ಸಚಿವ
ಎಣ್ಣೆ ಮತ್ತು ನೀರಿಗಿರುವ ಸಂಬಂಧವನ್ನು ಯಾರಾದರೂ ಕುಡುಕರ ಬಳಿ ಕೇಳಿ ಹೇಳುತ್ತಾರೆ.

ಗಾಂಧಿಯನ್ನು ಕೊಲ್ಲುವ ಬದಲು ಮುಹಮ್ಮದಲಿ ಜಿನ್ನಾರನ್ನು ಕೊಂದಿದ್ದರೆ ಅವರು ನಿಜವಾದ ಹಿಂದುತ್ವವಾದಿ ಎನಿಸಿಕೊಳ್ಳುತ್ತಿದ್ದರು- ಸಂಜಯ್ ರಾವತ್, ಶಿವಸೇನಾ ಸಂಸದ

ಒಟ್ಟಿನಲ್ಲಿ ಯಾರನ್ನಾದರೂ ಕೊಲ್ಲದೆ ಹಿಂದುತ್ವವಾದಿ ಆಗಲು ಸಾಧ್ಯವಿಲ್ಲ ಎಂದಾಯಿತು.

ಸಿ.ಎಂ.ಇಬ್ರಾಹೀಂ ಪಕ್ಷ ಬಿಟ್ಟಿರುವುದು ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ
-ಶ್ರೀರಾಮುಲು, ಸಚಿವ

ಪಕ್ಷ ಬಿಡುವುದರಿಂದ ಕೆಲವೊಮ್ಮೆ ಎಲ್ಲ ಸರಿಯಾಗುವ ಸಾಧ್ಯತೆಗಳು ಇರುತ್ತವೆ.

ಸಮಯ ಸಾಧಕರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಬಾರದು- ಎಚ್.ಆಂಜನೇಯ, ಮಾಜಿ ಸಚಿವ
ಸಮಯ ಸಾಧಕರ ಪಕ್ಷದಲ್ಲಿ ಅನ್ಯರೆಲ್ಲಿ ಫಿಟ್ ಆಗ್ತಾರೆ?

ಮೋದಿ ಸರಕಾರದಲ್ಲಿ ಯಾರಿಗೂ ಮಾಮೂಲಿ ಸಿಗುವುದಿಲ್ಲ- ಪ್ರತಾಪ ಸಿಂಹ, ಸಂಸದ
ಮಾಮೂಲಿಗಿಂತ ಸಾವಿರಪಾಲು ಹೆಚ್ಚು ಲಂಚಕ್ಕೆ ಮೈಸೂರು ಕಡೆ ಏನಂತಾರೆ?

ತ.ನಾಡು ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ- ಅಣ್ಣಾಮಲೈ, ತ.ನಾಡು ಬಿಜೆಪಿ ಅಧ್ಯಕ್ಷ
ಯಾವುದಾದರೂ ಪಕ್ಷ ಮೈತ್ರಿಗೆ ಒಪ್ಪಿದ ದಿನ ದೇಶಕ್ಕೆ ತಿಳಿಸಿ.

ಎಸ್ಪಿಟೋಪಿಗೆ ರಾಮ ಭಕ್ತರ ರಕ್ತದಿಂದ ಬಣ್ಣ ಬಳಿಯಲಾಗಿದೆ- ಯೋಗಿ ಆದಿತ್ಯನಾಥ್, ಉ.ಪ್ರ. ಸಿಎಂ
ನೀವು ಸಂಪೂರ್ಣ ಕುಡಿದೇ ಬಿಟ್ಟಿದ್ದರಿಂದ ಹೊರಗೆಲ್ಲೂ ಕಲೆಗಳು ಕಾಣಿಸುತ್ತಿಲ್ಲ.

ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಲಕ್ಷ ರೂ. ಮೊತ್ತದಲ್ಲಿ ಬರುತ್ತಿದ್ದ ಅನುದಾನಗಳು ಬಿಜೆಪಿ ಅಧಿಕಾರದ ಅವಧಿಯಲ್ಲಿ ಕೋಟಿ ರೂ. ಮೊತ್ತದಲ್ಲಿ ಬರುತ್ತಿದೆ- ಸುನೀಲ್ ಕುಮಾರ್, ಸಚಿವ

ಬಹುಶಃ ಪಕ್ಷಕ್ಕೆ ಬರುತ್ತಿರುವ ನಿಧಿಯ ಬಗ್ಗೆ ಹೇಳುತ್ತಿರಬೇಕು.

ಚುನಾವಣೆ ಬಂದಾಗ ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರು ವೋಟಿಗಾಗಿ ಮಾತ್ರ ಬೇಕು- ರೋಶನ್ ಬೇಗ್, ಮಾಜಿ ಸಚಿವ
ಬ್ರಹ್ಮಾಂಡ ಭ್ರಷ್ಟಾಚಾರಕ್ಕಾಗಿ ಮಾತ್ರ ಕಾಂಗ್ರೆಸನ್ನು ಬಳಸಿಕೊಂಡ ಕೆಲವು ಮುಸ್ಲಿಮ್ ನಾಯಕರೂ ಅದಕ್ಕೆ ಹೊಣೆಗಾರರು.

ಎಲ್ಲ ಧರ್ಮದವರಿಗೂ ಸಮಬಾಳು, ಸಮಪಾಲು ತತ್ವದ ಮೇಲೆ ನಿಂತಿರುವ ಪಕ್ಷ ಕಾಂಗ್ರೆಸ್ ಮಾತ್ರ- ಯು.ಟಿ.ಖಾದರ್, ಮಾಜಿ ಸಚಿವ
ಯಾವಾಗ್ಲೂ ಹಾಗೆ ನಿಂತಲ್ಲೇ ನಿಂತಿದ್ದರೆ ಸಾಕೇ? ಒಂದಷ್ಟು ಮುಂದಕ್ಕೂ ಚಲಿಸುತ್ತಿರಬೇಕು.

ಯತ್ನಾಳ್ ಮತ್ತು ರೇಣುಕಾಚಾರ್ಯ ಪದೇ ಪದೇ ಸಾರ್ವಜನಿಕವಾಗಿ ಬಹಿರಂಗ ಹೇಳಿಕೆ ನೀಡುವುದು ಒಳ್ಳೆಯ ಬೆಳವಣಿಗೆಯಲ್ಲ
-ಈಶ್ವರಪ್ಪ, ಸಚಿವ
ಹೊಲಸು ಕೆಲಸಗಳನ್ನು ಗುಟ್ಟಾಗಿ ಮಾಡುವ ಕಲೆಯನ್ನು ಅವರಿಗೆ ನೀವು ಕಲಿಸಿ ಕೊಡಿ.

ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ-ಎಚ್.ವಿಶ್ವನಾಥ್, ವಿ.ಪ. ಸದಸ್ಯ
ಭಸ್ಮಾಸುರ ಗೆದ್ದರೆ ನೀವು ಆತನ ಪಾದಸೇವೆಗೆ ಹಿಂಜರಿಯುವಿರಾ?

ಕ್ರಿಕೆಟ್‌ಗೆ ಕೊಡುಗೆ ನೀಡಲು ತಂಡದ ನಾಯಕನೇ ಆಗಬೇಕೆಂದಿಲ್ಲ- ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್ ತಂಡದ ನಿಕಟಪೂರ್ವ ನಾಯಕ
ಸಮಾಜ ಸೇವೆ ಸಲ್ಲಿಸಲು ನಮ್ಮನ್ನು ಮಂತ್ರಿಗಳಾಗಿಸಿ ಎಂದು ಅಂಗಲಾಚುವ ಪುಡಾರಿಗಳಿಗೆ ಇದರ ಒಂದಂಶ ವಿವೇಕವಾದರೂ ಇದ್ದಿದ್ದರೆ...!

ಬೊಮ್ಮಾಯಿ ಸಿಎಂ ಆಗಿದ್ದರೂ ನನ್ನ ಪಾಲಿಗೆ ಯಡಿಯೂರಪ್ಪನವರೇ ಈಗಲೂ ಮುಖ್ಯಮಂತ್ರಿ- ಕೆ.ಸಿ.ನಾರಾಯಣ ಗೌಡ, ಸಚಿವ
ಅನುಕೂಲಕ್ಕಾಗಿ ಯಾರನ್ನಾದರೂ ಅಪ್ಪ ಎನ್ನಬಲ್ಲವರು, ಯಾರನ್ನಾದರೂ ಮುಖ್ಯಮಂತ್ರಿ ಎಂದು ಎಂದು ಕರೆದರೆ ಅಚ್ಚರಿ ಇಲ್ಲ.

(ಗೋವಾದಲ್ಲಿ) ಒಂದು ವೇಳೆ ನೀವು ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕದೇ ಇದ್ದರೆ ಪರೋಕ್ಷವಾಗಿ ಬಿಜೆಪಿಗೆ ಮತ ಹಾಕಿದಂತೆ
-ಅರವಿಂದ ಕೇಜ್ರಿವಾಲ್, ಆಪ್ ನಾಯಕ
ಪಂಜಾಬ್‌ನಲ್ಲಿ ಕಾಂಗ್ರೆಸ್‌ನವರು ನಿಮ್ಮ ವಿರುದ್ಧ ಇದೇ ಡೈಲಾಗ್ ಹೊಡೀತಿದ್ದಾರೆ.

ಅಲ್ಲಲ್ಲಿ ರಸ್ತೆಗಳನ್ನು ಅಗೆದಿರುವುದನ್ನು ನೋಡಿದಾಗ ಹೊಟ್ಟೆ ಉರಿಯುತ್ತೆ- ಭೈರತಿ ಬಸವರಾಜ್, ಸಚಿವ

ಕಾಂಟ್ರಾಕ್ಟ್ ಕೈತಪ್ಪಿದ ಕೊರಗೇ?

ಅಹಿಂದುಗಳನ್ನು ದೇವಸ್ಥಾನ ಮತ್ತು ಹಿಂದೂಗಳ ಕಾರ್ಯಕ್ರಮಕ್ಕೆ ಕರೆಯಬೇಡಿ- ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ನಾಯಕ
ಇದು ಶೂದ್ರ ಮತ್ತು ಪಂಚಮರನ್ನು ಧಾರ್ಮಿಕ ಸ್ಥಳಗಳಿಂದ ಮಾರು ದೂರ ಇಡುವ ಹಳೆಯ ಅಮಾನುಷ ಸಂಪ್ರದಾಯವನ್ನು ಮತ್ತೆ ಹೇರುವುದಕ್ಕಿರುವ ಪೀಠಿಕೆಯಲ್ಲವೇ ಭಟ್ರೇ?

share
ಪಿ.ಎ.ರೈ
ಪಿ.ಎ.ರೈ
Next Story
X