`ಹಿಜಾಬ್' ಸರಕಾರದ ಸುತ್ತೋಲೆ ಪುನರ್ ಚಿಂತನೆಗೆ ಕರ್ನಾಟಕ ಮುಸ್ಲಿಂ ಜಮಾಅತ್ ಆಗ್ರಹ
ಬೆಂಗಳೂರು, ಫೆ. 6: ಸರಕಾರವು ಹಿಜಾಬ್ ಸಂಬಂಧವಾಗಿ ನಿನ್ನೆ ಹೊರಡಿಸಿದ ಸುತ್ತೋಲೆಯು ಆತುರದ ನಿರ್ಧಾರವಾಗಿದ್ದು ಅದನ್ನು ಪುನರ್ ಪರಿಶೀಲನೆಗೆ ಒಳಪಡಿಸಿ ಸಂವಿಧಾನ ದತ್ತವಾದ ಶೈಕ್ಷಣಿಕ, ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯ ಬೇಕೆಂದು ರಾಜ್ಯ ಸರಕಾರವನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಆಗ್ರಹಿಸಿದೆ.
ಮುಸ್ಲಿಂ ಮಹಿಳೆಯರ ಬಗ್ಗೆ ವಿಶೇಷ ಕಾಳಜಿಯುಳ್ಳವರಂತೆ ವರ್ತಿಸಿ ಇದೇ ಆಡಳಿತ ಪಕ್ಷದ ಕೇಂದ್ರ ನಾಯಕರು ತ್ರಿವಳಿ ತಲಾಕ್ ರದ್ದತಿ ಶಾಸನವನ್ನು ಜಾರಿಗೆ ತಂದರು. ಆದರೆ ಅದೇ ಪಕ್ಷದ ರಾಜ್ಯ ಸರಕಾರ ಮುಸ್ಲಿಂ ಮಹಿಳೆಯರ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಲು ಪ್ರಯತ್ನ ಪಡುತ್ತಿರುವುದು ದುರದೃಷ್ಟಕರ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಯೋಜನಾ ಸಮಿತಿ ಸಭೆ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಕಾರ್ಯದರ್ಶಿ ಅಬ್ದುಲ್ ಹಮೀದ್ ಬಜ್ಪೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





