ಕೋಟೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲೂ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು
ಕುಂದಾಪುರ, ಫೆ.7: ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ಆಕ್ಷೇಪಿಸಿ ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲೂ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಬಂದ ಘಟನೆ ಸೋಮವಾರ ನಡೆಯಿತು.
ಮೂವರು ವಿದ್ಯಾರ್ಥಿನಿಯರು ಕಾಲೇಜಿಗೆ ಹಿಜಾಬ್ ಧರಿಸಿ ಬಂದಿದ್ದರು. ಗೇಟಿನ ಬಳಿ ಅವರನ್ನು ತಡೆದು ಸರಕಾರದ ಆದೇಶದ ಬಗ್ಗೆ ಪ್ರಭಾರ ಪ್ರಾಂಶುಪಾಲರು ತಿಳಿಸಿದರು. ಈ ವೇಳೆಗಾಗಾಲೇ ಕೇಸರಿ ಶಾಲು ಧರಿಸಿ ಪ್ರತಿಭಟಿಸಿದರು.
ತದನಂತರ ಹಿಜಾಬ್ ಧರಿಸಿದ ಮೂವರು ವಿದ್ಯಾರ್ಥಿನಿಯರು ಕಾಲೇಜಿಗೆ ಪ್ರವೇಶಿಸದೆ ಮನೆಗೆ ತೆರಳಿದ್ದು ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಶಾಲು ತೆಗೆದಿಟ್ಟು ತರಗತಿಗೆ ಪ್ರವೇಶಿಸಿದರು.
Next Story