ರಾಜ್‍ಕುಮಾರ್ ಕಂಚಿನ ಪ್ರತಿಮೆ ಕಳವು ಪ್ರಕರಣ: ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು, ಫೆ.7: ಇಲ್ಲಿನ ಲುಂಬಿನಿ ಗಾರ್ಡನ್‍ನಲ್ಲಿ ವರನಟ ಡಾ.ರಾಜ್‍ಕುಮಾರ್ ಪುತ್ಥಳಿಯನ್ನು ಕಳವು ಮಾಡಿದ ಆರೋಪದಡಿ ಇಬ್ಬರನ್ನು ಅಮೃತಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಲುಂಬಿನಿ ಗಾರ್ಡನ್‍ನಲ್ಲಿ ವರನಟ ಡಾ.ರಾಜ್‍ಕುಮಾರ್ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಆ.24ರಂದು ಈ ಪುತ್ಥಳಿ ಕಳ್ಳತನವಾಗಿರುವ ಬಗ್ಗೆ ಅರಣ್ಯ ವೀಕ್ಷಕರಾದ ಸಿ.ಕೆ.ರಾಜು ಎಂಬುವರು ತಕ್ಷಣ ಮೇಲಧಿಕಾರಿ ಯೋಗೇಶ್ ಅವರ ಗಮನಕ್ಕೆ ತಂದರು.
ಈ ಬಗ್ಗೆ ಯೋಗೇಶ್ ಅವರು ದೂರು ನೀಡಿದ್ದು, ಅಮೃತಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಇಬ್ಬರು ಯುವಕರನ್ನು ವಶಕ್ಕೆ ಪಡೆದು ಡಾ.ರಾಜ್ ಪುತ್ಥಳಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
Next Story





