ಸಂತ ಆಂತೋನಿ ಆಶ್ರಮದಲ್ಲಿ ನೊವೆನಾ ಎರಡನೇ ದಿನದ ಕಾರ್ಯಕ್ರಮ

ಮಂಗಳೂರು, ಫೆ.7: ನಗರದಜೆಪ್ಪು ಸಂತ ಆಂತೋನಿ ಆಶ್ರಮದ ವತಿಯಿಂದ ನಡೆಯುತ್ತಿರುವ ಪುಣ್ಯ ಸ್ಮರಣಿಕೆಗಳ ಹಬ್ಬದ ನವ ದಿನಗಳ ನೊವೆನಾದ ಸೋಮವಾರದ (ಎರಡನೆ ದಿನದ) ಕಾರ್ಯಕ್ರಮದಲ್ಲಿಉರ್ವ ದೇವಾಲಯದ ಧರ್ಮಗುರು ಫಾ. ಬೆಂಜಮಿನ್ ಪಿಂಟೊ ಬಲಿಪೂಜೆ ಅರ್ಪಿಸಿದರು.
ಬೇರೆ ಬೇರೆ ಕಾರಣಗಳಿಗಾಗಿ ಜನರು ದೌರ್ಜನ್ಯಕ್ಕೆ ಒಳಗಾಗುವುದನ್ನು ಕಾಣುತ್ತೇವೆ. ಕೆಲವರು ರಾಜಕೀಯ ಕಾರಣಗಳಿಂದಾಗಿ, ಇನ್ನು ಕೆಲವರು ಧಾರ್ಮಿಕ ಸಂಕುಚಿತ ಮನೋಭಾವದಿಂದ ಮತ್ತೆ ಕೆಲವರು ಸಾಮಾಜಿಕ ವ್ಯವಸ್ಥೆಯಿಂದ ವಿವಿಧ ರೀತಿಯಲ್ಲಿ ಕಷ್ಟಕ್ಕೊಳಗಾಗುವುದನ್ನು ಕಾಣುತ್ತೇವೆ. ಇವರೆಲ್ಲರೂ ಅಬಲರಾಗಿದ್ದಾರೆ. ಆದರೆ ಅವರ ವಿಶ್ವಾಸ ದೇವರಲ್ಲಿರುವುದರಿಂದ ದೇವರು ಅವರೊಂದಿಗೆ ಇರುತ್ತಾರೆ ಎಂದರು.
ಜೆಪ್ಪು ಸಂತ ಜೋಸೆಫ್ ದೇವಾಲಯದ ಗಾಯನ ಮಂಡಳಿಯವರು ಭಕ್ತಿಗೀತೆಗಳನ್ನು ಹಾಡಿದರು. ಫಾ. ಒನಿಲ್ ಡಿಸೋಜ, ಸಂಸ್ಥೆಯ ನಿರ್ದೇಶಕ ನೊವೇನ ಪ್ರಾರ್ಥನೆ ನಡೆಸಿಕೊಟ್ಟರು.
Next Story