ದಂಪತಿಯಿಂದ ಯುವತಿಗೆ ಹಲ್ಲೆ, ಬೆದರಿಕೆ ಆರೋಪ; ದೂರು ದಾಖಲು

ಕಡಬ: ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಮಾನಭಂಗಕ್ಕೆ ಯತ್ನಿಸಿದ ವ್ಯಕ್ತಿ ಹಾಗೂ ಯುವತಿಗೆ ಹಲ್ಲೆ ಮಾಡಿದ ಆತನ ಪತ್ನಿಯ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ತೋಟದಲ್ಲಿ ನೀರು ಹಾಯಿಸಲೆಂದು ಸ್ಪಿಂಕ್ಲರ್ ಸೆಟ್ ಮಾಡುತ್ತಿದ್ದ ವೇಳೆ ಆಕೆಯ ಮಾವ ಎಂದು ಹೇಳಲಾದ ವ್ಯಕ್ತಿಯೋರ್ವ ಬಂದು ತಲೆಗೆ ಕೈಯಿಂದ ಹೊಡೆದು, ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ದೂರಲಾಗಿದೆ.
ವಿಷಯ ತಿಳಿದು ತೋಟಕ್ಕೆ ಬಂದಿದ್ದ ಯುವತಿಯ ಅಜ್ಜಿಗೂ ಹಲ್ಲೆ ಮಾಡಿದ್ದಲ್ಲದೇ, ಆರೋಪಿಯ ಪತ್ನಿ ಜೆನ್ಸಿ ಎಂಬಾಕೆ ಯುವತಿಗೆ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯುವತಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆಕೆ ನೀಡಿದ ದೂರಿನ ಆಧಾರದಲ್ಲಿ ಕಡಬ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





