`ವಿದ್ಯಾರ್ಥಿ, ಯುವಜನರಲ್ಲಿ ಐಕ್ಯತೆ, ಭ್ರಾತೃತ್ವವನ್ನು ಎತ್ತಿಹಿಡಿಯಬೇಕು’: ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ

ಬೆಂಗಳೂರು, ಫೆ.8: ಈಗಾಗಲೇ ಕೋವಿಡ್‍ನಿಂದ ಶಿಕ್ಷಣ ಮತ್ತು ಕಲಿಕೆಗೆ ಅಪಾರ ನಷ್ಟ ಆಗಿದೆ. ಮಕ್ಕಳು ಅದನ್ನು ಸರಿದೂಗಿಸಲು ಕಷ್ಟಪಡುತ್ತಿದ್ದು, ಈ ಸಂದರ್ಭದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವುದು ವಿಷಾದನೀಯವಾಗಿದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಬೇಸರ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಇಲಾಖೆ ಮತ್ತು ಸರಕಾರ ಪರಿಸ್ಥಿತಿ ನಿಭಾಯಿಸಲು ವಿಫಲವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಜಾತಿ-ಕೋಮುವಾದದ ದಳ್ಳುರಿಗೆ ಬಲಿಯಾಗದೆ ಸಂವಿಧಾನದ ಮೌಲ್ಯಗಳಾದ ಶಾಂತಿ, ಸಹಬಾಳ್ವೆ, ಸಹೋದರತ್ವ ಮತ್ತು ಸಹಿಷ್ಣುತೆಯನ್ನು ಎತ್ತಿ ಹಿಡಿಯಬೇಕು ಎಂದು ಅವರು ಮನವಿ ಮಾಡಿದರು.
Next Story





