ಭಾರತದಲ್ಲೀಗ ಮುಸ್ಲಿಮರ ಬಗೆಗಿನ ದ್ವೇಷ ಸಾಮಾನ್ಯವಾಗಿದೆ: ಉಮರ್ ಅಬ್ದುಲ್ಲಾ

ಶ್ರೀನಗರ,ಫೆ.8: ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ವಿರುದ್ಧ ಪ್ರತಿಭಟನೆಗಳು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಅವರು, ದೇಶದಲ್ಲೀಗ ಮುಸ್ಲಿಮರ ಬಗ್ಗೆ ದ್ವೇಷ ಸಾಮಾನ್ಯವಾಗಿಬಿಟ್ಟಿದ್ದು, ಅದು ತನ್ನ ವೈವಿಧ್ಯತೆಯ ಬಗ್ಗೆ ಹೇಳಿಕೊಳ್ಳುವ ದೇಶವಾಗಿ ಉಳಿದಿಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ,ಕರ್ನಾಟಕದ ಕಾಲೇಜೊಂದರಲ್ಲಿ ಕೇಸರಿ ಶಾಲುಗಳನ್ನು ಧರಿಸಿದ್ದ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯನ್ನು ಲೇವಡಿ ಮಾಡುತ್ತಿರುವುದನ್ನು ಮತ್ತು ಘೋಷಣೆಗಳನ್ನು ಕೂಗುತ್ತಿರುವುದನ್ನು ತೋರಿಸುವ ವೀಡಿಯೊ ಕುರಿತು ಅಬ್ದುಲ್ಲಾರ ಈ ಹೇಳಿಕೆ ಹೊರಬಿದ್ದಿದೆ.
‘ಒಂಟಿ ಯುವತಿಯನ್ನು ಗುರಿಯಾಗಿಸಿಕೊಂಡಾಗ ಈ ವಿದ್ಯಾರ್ಥಿಗಳು ತಾವು ಶೂರರು ಎಂದು ಭಾವಿಸಿದ್ದಾರೆ. ಮುಸ್ಲಿಮರ ವಿರುದ್ಧ ದ್ವೇಷವನ್ನು ಮುಖ್ಯವಾಹಿನಿಗೆ ತರಲಾಗಿದೆ ಮತ್ತು ಅದೀಗ ದೇಶದಲ್ಲಿ ಸಾಮಾನ್ಯವಾಗಿಬಿಟ್ಟಿದೆ ’ಎಂದು ಅವರು ಟ್ವೀಟಿಸಿದ್ದಾರೆ.
Next Story





