ಉಳ್ಳಾಲ ಉರೂಸ್‍ಗೆ ನಗರ ಸಭೆ ಸಿಬ್ಬಂದಿ, ಪ್ರತಿನಿಧಿಯನ್ನು ಆಹ್ವಾನಿಸಿದ ದರ್ಗಾ ಅಧ್ಯಕ್ಷ

ಉಳ್ಳಾಲ: ಫೆ.10ರಿಂದ ಆರಂಭಗೊಳ್ಳಲಿರುವ ಉಳ್ಳಾಲ ದರ್ಗಾ ಉರೂಸ್‍ಗೆ ಉಳ್ಳಾಲ ನಗರ ಸಭಾ ಸಿಬ್ಬಂದಿ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಮಂಗಳವಾರ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಆಹ್ವಾನ ನೀಡಿದ್ದಾರೆ.
ಮಂಗಳವಾರ ನಗರ ಸಭೆಯ ಕಚೇರಿಯಲ್ಲಿ ಬಜೆಟ್‍ಗೆ ಸಂಬಂಧಿಸಿ ನಡೆಯುತ್ತಿದ್ದ ಸಭೆಗೆ ಆಗಮಿಸಿದ ಅವರು ಉರೂಸ್ ಪ್ರಯುಕ್ತ ನಗರ ಸಭೆ ಹಮ್ಮಿಕೊಂಡ ಕಾರ್ಯಗಳಿಗೆ ಶ್ಲಾಘನೀಯ ವ್ಯಕ್ತಪಡಿಸಿದರು.
ಉಳ್ಳಾಲ ನಗರ ಸಭೆ ಉಳ್ಳಾಲ ಉರೂಸ್‍ಗಾಗಿ ಬಹಳಷ್ಟು ಕಾಮಗಾರಿ ಹಮ್ಮಿಕೊಂಡಿದೆ. ಇಷ್ಟು ಕಾರ್ಯ ಮಾಡಿದರೆ ಸಾಕಾಗದು. ಉಳ್ಳಾಲ ದರ್ಗಾದಲ್ಲಿ 25 ದಿನಗಳ ಕಾಲ ನಡೆಯುವ ದರ್ಗಾ ಉರೂಸ್ ಸಂದರ್ಭ ನಗರ ಸಭೆ ಸಿಬ್ಬಂದಿ ಹಾಗೂ ಚುನಾಯಿತ ಪ್ರತಿನಿಧಿಗಳು ಉರೂಸ್‍ಗೆ ಆಗಮಿಸಿ ತಮ್ಮ ಜತೆ ಇರಬೇಕೆಂದು ಕರೆ ನೀಡಿದರು.
ಈ ಸಂದರ್ಭ ನಗರ ಸಭೆ ಪೌರಾಯುಕ್ತ ರಾಯಪ್ಪ, ಅಧ್ಯಕ್ಷ ಚಿತ್ರಕಲಾ, ಉಪಾಧ್ಯಕ್ಷ ಅಯ್ಯೂಬ್ ಮಂಚಿಲ ಸ್ಥಾಯಿ ಸಮಿತಿ ಅಧ್ಯಕ್ಷ ಝರೀನ ರವೂಫ್ ಉಪಸ್ಥಿತರಿದ್ದರು.
Next Story