ಶಾಸಕರ ವಿರುದ್ಧ ಲಂಚ ಆರೋಪ: ಆಣೆ ಪ್ರಮಾಣಕ್ಕೆ ನಾನು ಸಿದ್ಧ ಎಂದ ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ, ಫೆ.08: ಮರಳು ಗುತ್ತಿಗೆದಾರಿಂದ ಶಾಸಕ ಹರತಾಳು ಹಾಲಪ್ಪ ಹಪ್ತ ವಸೂಲಿ ಮಾಡುತ್ತಿದ್ದಾರೆ ಎಂಬ ಹೇಳಿಕೆಗೆ ಈಗಲೂ ಬದ್ಧ ವಾಗಿದ್ದು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ನಾನು ರೆಡಿ ಎಂದು ಸಾಗರ ಮಾಜಿ ಶಾಸಕ,ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,ಆಣೆ ಪ್ರಮಾಣದ ದಿನ ಶಾಸಕರೊಂದಿಗೆ ಹಪ್ತವಸೂಲಿ ಮಾಡುತ್ತಿರುವ ಅವರ ಪರಮಾಪ್ತ ವಿನಾಯಕ ಭಟ್ಟರೂ ಕೂಡ ಬರಬೇಕು. ಶಾಸಕರು ಹಪ್ತ ವಸೂಲಿ ಮಾಡುವುದೆ ವಿನಾಯಕ ಭಟ್ಟರ ಮೂಲಕ. ಸಾಗರದಲ್ಲಿ ಯಾವ ಕೆಲಸ ಆಗಬೇಕಾದರೂ ಮೊದಲು ವಿನಾಯಕನ ಹುಂಡಿಗೆ ಹಣ ಜಮೆಯಾಗಬೇಕೆಂದು ಆಪಾದಿಸಿದರು.
ಸಾಗರದ ಗುತ್ತಿಗೆದಾರರನ್ನು,ಮರಳು ಲಾರಿಯವರನ್ನು ಹೆದರಿಸಿ,ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಾರೆ.ಹಣ ಕೊಡದವರ ವಿರುದ್ದ ಪೋಲಿಸ್ ರನ್ನು ಬಳಸಿಕೊಂಡು ಕೇಸು ಹಾಕುತ್ತಿದ್ದಾರೆ.ಈ ವಿಚಾರ ಚರ್ಚೆಗೆ ಬಂದಾಗ ನನ್ನ ಅವದಿಯಲ್ಲಿ ಇನ್ಸ್ಪೆಕ್ಟರ್ ಗುಡಾಜಿಯವರ ಮೂಲಕ ಹಣ ವಸೂಲಿ ಮಾಡುತ್ತಿದ್ದೆ ಎಂದು ಆಪಾದನೆ ಮಾಡುತ್ತಾರೆ.ಇವೆಲ್ಲಾಕ್ಕೂ ದೇವರೇ ಸಾಕ್ಷಿ.ಹಾಗಾಗಿ ಆಣೆ ಪ್ರಮಾಣ ನೆಡೆಯಲಿ ಎಂದರು.
ನನ್ನ ಆಹ್ವಾನವನ್ನು ಸ್ವೀಕರಿಸಿದ ಶಾಸಕರು ಈ ತಿಂಗಳ ಹದಿಮೂರನೆಯ ತಾರೀಖಿನಂದು ಪ್ರಮಾಣ ಕ್ಕೆ ಬರಲು ದಿನಾಂಕ ನಿಗದಿಪಡಿಸಿದ್ದರು.ನಾನು ಡನ್ ಎಂದಿದ್ದೆ.ಈಗ ಹನ್ನೆರಡನೆಯ ತಾರೀಖಿನಂದು ಬರಲು ಹೇಳಿದ್ದಾರೆ. ಗೋವಾ ಚುನಾವಣೆಯ ಪ್ರಚಾರಕ್ಕೆ ಹೋಗುವ ಕಾರಣಕ್ಕಾಗಿ ಈ ದಿನದಂದು ನನಗೆ ಧರ್ಮಸ್ಥಳಕ್ಕೆ ಬರಲು ಆಗುವುದಿಲ್ಲ. ಫೆಬ್ರವರಿ ಇಪ್ಪತ್ತರ ನಂತರ ದಿನಾಂಕವನ್ನು ನಿಗದಿಪಡಿಸಲಿ.ನಾನು ರೆಡಿ ಎಂದರು.
ಶಾಸಕರು ಸಿಗಂದೂರು ರಸ್ತೆ ಆಗಲೀಕರಣದಲ್ಲಿ ರಸ್ತೆಯ ಒಂದು ಬದಿ ಮರ ಮಾತ್ರ ಕಡಿಯುವುದಾಗಿ ದೇವರ ಹೆಸರಲ್ಲಿ ಪ್ರಮಾಣ ಮಾಡಿದ್ದರು.ಈಗ ಎರಡೂ ಬದಿಗಳಲ್ಲಿ ಮರ ಕಡಿಸುತ್ತಿದ್ದಾರೆ.ಇವರಲ್ಲಿ ಆಣೆ ಪ್ರಮಾಣಕ್ಕೆ ಬೆಲೆಯೇ ಇಲ್ಲ ಎಂದರು.
ಗುತ್ತಿಗೆದಾರರೊಂದಿಗೆ ಸಭೆ ಮಾಡುವಾಗ ಮೊಬೈಲ್ ಫೋನ್ ಗಳನ್ನು ಹೊರಗಿಡಿಸಿ ಕಮಿಷನ್ ಮಾತನಾಡುತ್ತಾರೆ.ಪಂಚಾಯತ್ ರಾಜ್ ಗೆ ಬಂದಿದ್ದ 20 ಕೋಟಿ ಅನುದಾನ ವನ್ನು ಕೆಆರ್ ಡಿಎಲ್ ಗೆ ವರ್ಗಾವಣೆ ಮಾಡಿ ಕಮಿಷನ್ ಹೆಚ್ಚು ಮಾಡಿಕೊಳ್ಳುತ್ತಾರೆ.ಪಂಚಾಯತ್ ರಾಜ್ ನಲ್ಲಿ ಒಂದು ಸಾವಿರ ಮೀಟರ್ ಮಾಡಬಹುದಾದ ರಸ್ತೆಯನ್ನು ಕೆ ಆರ್ ಡಿ ಎಲ್ ನವರು ಕೇವಲ279 ಮಾಡುತ್ತಾರೆ.ಅಲ್ಲೂ ಕಮಿಷನ್ ಹೊಡೆಯುತ್ತಾರೆ.ನಿರಾವರಿ ನಿಗಮದ 50 ಕೋಟಿ ಕಾಮಗಾರಿಯನ್ನು ನಿರ್ಮಿತಿಕೇಂದ್ರಕ್ಕೆ ವರ್ಗಾವಣೆ ಮಾಡುವ ಮೂಲಕ ಪೀಸ್ ವರ್ಕ್ ಕೊಟ್ಟು ಭ್ರಷ್ಟಾಚಾರ ಕ್ಕೆ ಅವಕಾಶ ಮಾಡಿದ್ದಾರೆ ಎಂದು ದೂರಿದರು.
ಸಾಗರದಲ್ಲಿ ವಿದ್ಯುತ್ ಅಭಾವವಿದೆ.ಆದರೆ ಜಲಾಶಯದಲ್ಲಿ ನೀರು ಖಾಲಿಯಾಗುತ್ತಿದೆ.ನದಿಪಾತ್ರದಲ್ಲಿರುವ ಖಾಸಗಿ ವಿದ್ಯುತ್ ಸ್ಥಾವರಗಳಿಗೆ ಅನುಕೂಲ ಮಾಡಿಕೊಡಲು ಈ ಕೆಲಸ ಮಾಡಲಾಗುತ್ತಿದೆ.ಶಾಸಕರು ಕೆಪಿಸಿ ಎದುರು ಪ್ರತಿಭಟನೆ ಮಾಡಿ ನೀರು ಬಿಟ್ಟಿದ್ದಕ್ಕೆ ಖಾಸಗಿ ವಿದ್ಯುತ್ ಕಂಪನಿಯಿಂದ ಕಮಿಷನ್ ಪಡೆಯಲು ನಾಟಕ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಸರ್ಕಾರಕ್ಕೆ ಜಿ.ಪಂ.,ತಾ.ಪಂ ಚುನಾವಣೆ ಮಾಡುವ ಆಸಕ್ತಿ ಇಲ್ಲ.ಅವರಿಗೆ ಸೋಲಿನ ಭಯ ಕಾಡುತ್ತಿದೆ.ಈಶ್ವರಪ್ಪ ಸುಳ್ಳು ಹೇಳುವುದರಲ್ಲಿ ನಿಸ್ಸೀವರು.ಚುನಾವಣೆ ನೆಡೆಸುತ್ತೆವೆ ಎಂದು ಹೇಳುವ ಅವರ ಮಾತಿನಲ್ಲಿ ಯಾರಿಗೂ ನಂಬಿಕೆ ಇಲ್ಲ ಎಂದರು.
ರಾಜ್ಯ ಬಿಜೆಪಿ ಗೊಂದಲದ ಗೂಡಾಗಿದ್ದು ಬಣಗಳಿಂದ ತುಂಬಿ ಹೋಗಿದೆ.ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಮಾಡಿದರೆ ಸರ್ಕಾರದ ಪತನ ಗ್ಯಾರಂಟಿ ಎಂದರು. ಯಡಿಯೂರಪ್ಪರ ಮಕ್ಕಳಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯಲು ಶೋಭ ಮೇಡಂ ಬಿಡುವುದಿಲ್ಲ. ಯಡಿಯೂರಪ್ಪ ಸಿ.ಎಂ.ಆದಾಗ ಅವರ ಮಕ್ಕಳು ಶೋಭ ಮೇಡಂರನ್ನು ಹತ್ತಿರ ಸೇರಿಸಿರಲಿಲ್ಲ.ಹೀಗಾಗಿ ಕೇಂದ್ರದಲ್ಲಿ ಪ್ರಭಾವಿಯಾಗಿರುವ ಅವರು ಯಡಿಯೂರಪ್ಪ ಮಕ್ಕಳು ಮಂತ್ರಿ ಮಾಡಲು ತೊಡಕಾಗಿದ್ದಾರೆಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜಿ.ಡಿ.ಮಂಜುನಾಥ,ರಾಜ್ ಕುಮಾರ,ಮುಜೀಬ್ ಇದ್ದರು.







