ಬೆಂಗಳೂರು: ಕಾರು ಹರಿಸಿ ಬೀದಿನಾಯಿ ಹತ್ಯೆ ಪ್ರಕರಣ; 10 ಲಕ್ಷ ರೂ.ಬಾಂಡ್ ಬರೆಸಿದ ಪೊಲೀಸರು

ಬೆಂಗಳೂರು, ಫೆ.8: ನಗರದಲ್ಲಿ ಬೀದಿನಾಯಿ ಮೇಲೆ ಕಾರು ಹತ್ತಿಸಿದ ಪ್ರಕರಣ ಸಂಬಂಧ ಆರೋಪಿ ಆದಿಕೇಶವುಲು ನಾಯ್ಡು ಅವರ ಮೊಮ್ಮಗ ಆದಿಕೇಶವನಿಂದ ಪೊಲೀಸರು 10 ಲಕ್ಷ ರೂ. ಬಾಂಡ್ ಬರೆಯಿಸಿದ್ದಾರೆ.
ಘಟನೆಗೆ ಕಾರಣವಾಗಿದ್ದ ಆರೋಪದಡಿ ಆದಿಕೇಶವನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದರು. ಬಳಿಕ ಠಾಣಾ ಜಾಮೀನಿನ ಮೇರೆಗೆ ಆತನನ್ನು ಬಿಡುಗಡೆ ಮಾಡಲಾಗಿತ್ತು. ಇದಕ್ಕೂ ಮುನ್ನ ಆತನಿಂದ 10 ಲಕ್ಷ ರೂ. ಬಾಂಡ್ ಬರೆಯಿಸಿ ಕಳುಹಿಸಿದ್ದಾರೆ.
ಇತ್ತೀಚಿಗೆ ಜಯನಗರದ ಒಂದನೇ ಬ್ಲಾಕ್‍ನ 10ನೆ ಬಿ ಮುಖ್ಯರಸ್ತೆಯ ಮನೆ ಮುಂಭಾಗದಲ್ಲಿ ಆರೋಪಿ ಕಾರಿನಲ್ಲಿ ಉದ್ದೇಶಪೂರ್ವಕವಾಗಿ ನಾಯಿ(ಲಾರಾ) ಮೇಲೆ ಕಾರು ಹತ್ತಿಸಿ ಪರಾರಿಯಾಗಿದ್ದ. ಇದಾದ ಬಳಿಕ ಜನವರಿ 28 ರಂದು ಲಾರಾ ಮೇಲೆ ಕಾರು ಹತ್ತಿಸಿದ್ದ ಪ್ರಕರಣ ಬಯಲಿಗೆ ಬಂದಿತ್ತು.
ಮನೆಯ ಮುಂದಿನ ಸಿಸಿಟಿವಿಯಲ್ಲಿ ಅಪಘಾತ ದೃಶ್ಯ ಸೆರೆಯಾಗಿತ್ತು. ಈ ಸಂಬಂಧ ಜ.29 ರಂದು ಸಿದ್ದಾಪುರ ಪೆÇಲೀಸ್ ಠಾಣೆಯಲ್ಲಿ ಬದ್ರಿ ಪ್ರಸಾದ್ ಎಂಬುವವರು ದೂರು ನೀಡಿದ್ದು, ಇದರನ್ವಯ ಆರೋಪಿಯನ್ನು ಬಂಧಿಸಲಾಗಿತ್ತು.
Next Story





