ಗೃಹ ಸಚಿವರು ಮಾಡಿದ್ದೇನು..?
ಮಾನ್ಯರೇ,
ಹಿಜಾಬ್ ಮತ್ತು ಕೇಸರಿ ಶಾಲು ಎರಡನ್ನೂ ಶಾಲೆಗಳಲ್ಲಿ ಹಾಕಲು ಬಿಡಲ್ಲ.. ಎಂದು ಗೃಹ ಸಚಿವರು ಹೇಳಿದ್ದಾರೆ! ಇದು ಹೇಗಿದೆಯೆಂದರೆ..? ಅಪರಾಧ ಮಾಡಿದವರನ್ನೂ, ನೊಂದು ದೂರು ಕೊಟ್ಟವರನ್ನೂ ಸೇರಿಸಿ ಇಬ್ಬರಿಗೂ ಶಿಕ್ಷೆ ಕೊಡುತ್ತೇವೆ ಅಥವಾ ಇಬ್ಬರನ್ನೂ ಕ್ಷಮಿಸುತ್ತೇವೆ ಎಂದು ತೀರ್ಪು ಕೊಟ್ಟಂತಿದೆ!!
ಹಿಜಾಬ್ ಒಂದು ಧರ್ಮದ ನಂಬಿಕೆ ಮತ್ತು ಆಚರಣೆ, ಕೇಸರಿ ಶಾಲು ಯಾವುದೇ ಧರ್ಮದ ನಂಬಿಕೆಯೂ ಅಲ್ಲ, ಆಚರಣೆಯೂ ಅಲ್ಲ..
ಒಂದು ಧರ್ಮದ ನಂಬಿಕೆಯನ್ನು ದಮನ ಮಾಡುವ ರಾಜಕೀಯ ದುರುದ್ದೇಶದಿಂದ ಕೇಸರಿ ಶಾಲು ತಂದಿದ್ದಷ್ಟೇ.. ಕೇಸರಿ ಶಾಲನ್ನು ನಿಷೇಧಿಸಿದರೆ ಯಾರಿಗೂ ತೊಂದರೆಯಿಲ್ಲ. ಆದರೆ ಹಿಜಾಬ್ ಅನ್ನು ನಿಷೇದಿಸಿದರೆ ಸಾಂವಿಧಾನಿಕವಾಗಿ ಒಂದು ಧಾರ್ಮಿಕ ನಂಬಿಕೆಗೆ ಅಡ್ಡಿಪಡಿಸಿದಂತಾಗುತ್ತದೆ. ಗೃಹ ಸಚಿವರು ಮಾಡಿದ್ದೇನು..? ಕೇಸರಿ ಶಾಲಿನ ನೆಪದಲ್ಲಿ ಒಂದು ಧಾರ್ಮಿಕ ನಂಬಿಕೆಗೆ ದ್ರೋಹ ಮಾಡಿದ್ದಲ್ಲವೆ?
ಯೂನಿಫಾರಂ ಸರಿ, ಆದರೆ ಮುಸ್ಲಿಮ್ ಹೆಣ್ಣುಮಕ್ಕಳು ಯೂನಿಫಾರಂ ಜತೆ ಅದೇ ಬಣ್ಣದ ಹಿಜಾಬ್ ಅನ್ನು ಧರಿಸಿ ಬರಲಿಕ್ಕೆ ಅವಕಾಶ ಕೊಡಬೇಕು, ಸಿಖ್ ಧರ್ಮೀಯರು ಯಾವುದೇ ಯೂನಿಫಾರಂ ಜತೆ ಅದೇ ಬಣ್ಣದ ಟರ್ಬನ್ ಧರಿಸಿ ಬರುವಂತೆ. ಆದರೆ ಯೂನಿಫಾರಂ ಜತೆ ಯಾವ ಧರ್ಮಕ್ಕೂ ಅಧಿಕೃತವಾಗಿ ಸೇರದ, ಕೇವಲ ದುರುದ್ದೇಶದಿಂದ ಕೂಡಿದ ಕೇಸರಿ ಶಾಲನ್ನು ಧರಿಸಿ ಬರುವುದು ತಪ್ಪಾಗುತ್ತದೆ. ಆದ್ದರಿಂದ ಗೃಹ ಸಚಿವರು ತಮ್ಮ ಹೇಳಿಕೆಯನ್ನು ಮರು ಪರಿಶೀಲಿಸಿ ಹಿಜಾಬ್‌ಗೆ ಮಾತ್ರ ಅವಕಾಶ ಕೊಡಬೇಕು..





