Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ದೇಶದ ಕಲೆಗಳಿಗೆ ಸಿಗಬೇಕಾದ ಹಣ...

ದೇಶದ ಕಲೆಗಳಿಗೆ ಸಿಗಬೇಕಾದ ಹಣ ಪ್ರತಿಮೆಗಳಿಗೆ ವ್ಯಯವಾಗುತ್ತಿದೆ!

ಶುದ್ಧಬ್ರತ ಸೇನ್‌ಗುಪ್ತಶುದ್ಧಬ್ರತ ಸೇನ್‌ಗುಪ್ತ9 Feb 2022 10:35 AM IST
share
ದೇಶದ ಕಲೆಗಳಿಗೆ ಸಿಗಬೇಕಾದ ಹಣ ಪ್ರತಿಮೆಗಳಿಗೆ ವ್ಯಯವಾಗುತ್ತಿದೆ!

ಮೊಗಲ್ ಸಾಮ್ರಾಜ್ಯವು ಮನಮೋಹಕ ಮಿನಿಯೇಚರ್ ಚಿತ್ರಗಳಿಗೆ ಎಷ್ಟು ಪ್ರಸಿದ್ಧಿಯಾಗಿತ್ತೆಂದರೆ, ‘ಮೊಗಲ್ ಮಿನಿಯೇಚರ್’ ಎನ್ನುವುದು ಮಾನ್ಯತೆ ಪಡೆದ ಐತಿಹಾಸಿಕ ಪದವಾಗಿದೆ. ಅದೇ ರೀತಿ, ನರೇಂದ್ರ ಮೋದಿಯ ಅವಧಿಯನ್ನೂ ಬೃಹತ್, ಅನಲಂಕಾರಿಕ, ಹೆಚ್ಚಾಗಿ ಚೀನಾದಲ್ಲೇ ತಯಾರಾದ ಪ್ರತಿಮೆಗಳಿಗಾಗಿ ನೆನಪಿಡಲಾಗುವುದು.

66 ಮೀಟರ್ ಎತ್ತರದ ‘ಸಮಾನತೆಯ ಪ್ರತಿಮೆ’ ಯೋಜನೆ (ಹೌದು, ಅದರ ಹೆಸರೇ ಹಾಗೆ)ಗೆ 1,000 ಕೋಟಿ ರೂಪಾಯಿ ವೆಚ್ಚವಾಗಿದೆ. ಈ ಎಲ್ಲ ಹಣವನ್ನು ತ್ರಿದಂಡಿ ಯೋಗಿ ಚಿನ್ನ ಜೀಯರ್ ಸ್ವಾಮಿ ನೇತೃತ್ವದ ಶ್ರೀ ರಾಮಾನುಜ ಸಹಸ್ರಾಬ್ದಿ ಟ್ರಸ್ಟ್ ದೇಣಿಗೆಗಳ ಮೂಲಕ ಸಂಗ್ರಹಿಸಿದೆ. ವಿಶಿಷ್ಟಾದ್ವೈತ ವೇದಾಂತ ಚಿಂತನೆಗೆ ನೀಡಿರುವ ದೇಣಿಗೆಗಳಿಗಾಗಿ ಮಧ್ಯ ಕಾಲೀನ ಸಂತ ಶ್ರೀ ರಾಮಾನುಜಾಚಾರ್ಯರ ಗೌರವಾರ್ಥ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಈ ಪ್ರತಿಮೆಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಅನಾವರಣಗೊಳಿಸಿದರು.

ಈ ಪ್ರತಿಮೆಗೆ ಮಾಡಿರುವ ಖರ್ಚಿನ ಪ್ರಮಾಣವನ್ನು ತಿಳಿಯಬೇಕಾದರೆ, ಭಾರತ ಸರಕಾರವು ತನ್ನ ಬಜೆಟ್‌ನಲ್ಲಿ ಸಂಸ್ಕೃತಿ ಸಚಿವಾಲಯಕ್ಕೆ ಎಷ್ಟು ಅನುದಾನವನ್ನು ನೀಡಿದೆ ಎನ್ನುವುದನ್ನು ನೋಡಬೇಕು. ಈ ಬಾರಿ ಬಜೆಟ್‌ನಿಂದ ಸಂಸ್ಕೃತಿ ಸಚಿವಾಲಯಕ್ಕೆ 3,000 ಕೋಟಿ ರೂಪಾಯಿ ಅನುದಾನ ಲಭಿಸಿದೆ. ಅಂದರೆ, ಈ ಒಂದು ಪ್ರತಿಮೆಯ ವೆಚ್ಚವೇ ಸಂಸ್ಕೃತಿ ಸಚಿವಾಲಯದ ಇಡೀ ಅನುದಾನದ ಮೂರನೇ ಒಂದು ಭಾಗ.

 ಕೊಚ್ಚಿಯಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಕಲಾ ಪ್ರದರ್ಶನದ ಖರ್ಚು ಎಷ್ಟು ಗೊತೇ? ಸುಮಾರು 26 ಕೋಟಿ ರೂಪಾಯಿ. ಈ ಲೆಕ್ಕದಲ್ಲಿ ಹೇಳುವುದಾದರೆ, ಪ್ರತಿಮೆಯನ್ನು ನಿರ್ಮಿಸಲು ಬಳಸಲಾದ ಹಣದಿಂದ ಭಾರತದಾದ್ಯಂತ ಕೊಚ್ಚಿ ಕಲಾ ಪ್ರದರ್ಶನದ ಮಾದರಿಯ 38 ಕಲಾ ಪ್ರದರ್ಶನಗಳನ್ನು ಭಾರತದಾದ್ಯಂತ ಏರ್ಪಡಿಸಬಹುದು.

ಕುತೂಹಲದ ಸಂಗತಿಯೆಂದರೆ, ಅಯೋಧ್ಯೆಯ ಸಮೀಪ ನಿರ್ಮಿಸಲು ಉದ್ದೇಶಿಸಲಾಗಿರುವ ಪ್ರಸ್ತಾಪಿತ ಶ್ರೀರಾಮ ಪ್ರತಿಮೆ 235 ಮೀಟರ್ ಎತ್ತರ ಇರುತ್ತದೆ ಎನ್ನಲಾಗಿದೆ. ಆ ಪ್ರತಿಮೆ ನಿರ್ಮಾಣಗೊಂಡರೆ ಅದು ಜಗತ್ತಿನಲ್ಲೇ ಅತಿ ಎತ್ತರದ ಪ್ರತಿಮೆಯಾಗಿರುತ್ತದೆ. 182 ಮೀಟರ್ ಎತ್ತರದ ‘ಸ್ಟಾಚ್ಯೂ ಆಫ್ ಯೂನಿಟಿ’ಯನ್ನು ಮೋದಿ ಈಗಾಗಲೇ 2,989 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಪ್ರಸ್ತಾಪಿತ ಶ್ರೀರಾಮ ಪ್ರತಿಮೆಗೆ ಉತ್ತರಪ್ರದೇಶ ಸರಕಾರವು 2,500 ಕೋಟಿ ರೂಪಾಯಿ ಖರ್ಚು ಮಾಡಲಿದೆ. ಇದರ ವೆಚ್ಚವನ್ನು ಉತ್ತರಪ್ರದೇಶದ ತೆರಿಗೆ ಪಾವತಿದಾರರು ಹೊರಲಿದ್ದಾರೆ. ಯಾಕೆಂದರೆ, ಈ ಯೋಜನೆಯು ರಾಜ್ಯ ಸರಕಾರದ ಯೋಜನೆಯಾಗಿದೆ. ಇಷ್ಟು ಹಣದಿಂದ ದೇಶಾದ್ಯಂತ 93 ಕೊಚ್ಚಿ ಕಲಾ ಪ್ರದರ್ಶನಗಳನ್ನು ಏರ್ಪಡಿಸಬಹುದಾಗಿದೆ.

ಸಮಕಾಲೀನ ಜಾಗತಿಕ ಕಲೆಯ ಕ್ಷೇತ್ರದಲ್ಲಿ, ‘ಡಾಕ್ಯುಮೆಂಟ’ ಅನ್ನು ಅತ್ಯಂತ ಮಹತ್ವದ ಕಾರ್ಯಕ್ರಮ ಎಂಬುದಾಗಿ ಭಾವಿಸಲಾಗಿದೆ. ಕಳೆದ ಆವೃತ್ತಿಯ ಡಾಕ್ಯುಮೆಂಟ ಕಾರ್ಯಕ್ರಮದ ವೆಚ್ಚ ಸುಮಾರು 44 ಮಿಲಿಯ ಡಾಲರ್ (ಸುಮಾರು 328 ಕೋಟಿ ರೂಪಾಯಿ). ಈ ಹಣವನ್ನು ಭರಿಸುವುದು ಜರ್ಮನಿಯ ಕೇಂದ್ರ ಸರಕಾರ, ಜರ್ಮನಿಯ ಹೆಸ್ಸಿ ರಾಜ್ಯದ ಸರಕಾರ ಮತ್ತು ಕೆಸೆಲ್ ನಗರ.

ಭಾರತದ ಮೂರನೇ ಅತಿ ಬಡ ರಾಜ್ಯವಾಗಿರುವ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಕಟ್ಟಲು ಉದ್ದೇಶಿಸಲಾಗಿರುವ ಶ್ರೀರಾಮ ಪ್ರತಿಮೆಗೆ ಖರ್ಚು ಮಾಡಲಾಗುವ ಸಾರ್ವಜನಿಕರ ಹಣದಿಂದ ಭಾರತದಾದ್ಯಂತ ಡಾಕ್ಯುಮೆಂಟ ಗಾತ್ರದ ಏಳೂವರೆ ಸಮಕಾಲೀನ ಕಲಾ ಉತ್ಸವಗಳನ್ನು ಆಯೋಜಿಸಬಹುದು. ಗಾತ್ರದ ಮಟ್ಟಿಗೆ ಹೇಳುವುದಾದರೆ, ಜರ್ಮನಿಯು ಉತ್ತರ ಪ್ರದೇಶಕ್ಕಿಂತ ಕೇವಲ 1.47 ಪಟ್ಟು ಇದೆ.

ಇದು ನಮ್ಮ ಸಮಾಜದ ಸಮಕಾಲೀನ ಸಾಂಸ್ಕೃತಿಕ ಆದ್ಯತೆಗಳೇನು ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತದೆ. ಅಂದರೆ ಯಾವುದಕ್ಕೆ ರಾಜಾಶ್ರಯ ಸಿಗುತ್ತದೆ ಹಾಗೂ ಯಾವುದಕ್ಕೆ ಸಿಗುವುದಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಇದು ಸಮಕಾಲೀನ ಭಾರತದ ಕಲೆ ಮತ್ತು ಸಂಸ್ಕೃತಿಯಾಗಿದೆ.

ಭಾರತದ ಸಮಕಾಲೀನ ಕಲೆಯೊಂದಿಗೆ ಸಂಬಂಧ ಹೊಂದಿರುವವರು- ಅಂದರೆ ಕಲಾವಿದರು, ವಿಮರ್ಶಕರು, ಕ್ಯುರೇಟರ್‌ಗಳು ಮತ್ತು ವಿದ್ವಾಂಸರು- ಈ ವಿಷಯದ ಬಗ್ಗೆ ಯೋಚಿಸುತ್ತಾ ಸ್ವಲ್ಪ ಸಮಯವನ್ನು ಕಳೆಯಬಹುದಾಗಿದೆ. ಆದರೆ, ಭಾರತದಲ್ಲಿ ಕಲೆಗೆ ಸರಕಾರಿ ಹಣವಾಗಲಿ ಖಾಸಗಿ ದೇಣಿಗೆಯಾಗಲಿ ಬರುತ್ತಿಲ್ಲ ಎನ್ನುವ ವಿಷಾದದಿಂದ ಅವರು ಮೊದಲು ಹೊರಬರಬೇಕಾಗಿದೆ. ಹಣ ಬರುತ್ತಿದೆ. ಈ ರೀತಿಯ ಕಲೆಗಾಗಿ. ಇದು ಕಲೆಗೆ ಆಶ್ರಯವಿಲ್ಲ ಎನ್ನುವ ಕಲ್ಪನೆಗಿಂತ ಹೆಚ್ಚು ಆಘಾತಕಾರಿ ವಾಸ್ತವವಾಗಿದೆ.

ಕಪ್ಪು ಕುಳಿಯೊಂದು ತನ್ನ ಸುತ್ತಲಿನ ದಿಗಂತದಲ್ಲಿ ಹಾದು ಹೋಗುವ ಎಲ್ಲವನ್ನೂ ತಿಂದು ಹಾಕುತ್ತದೆ. ಅಂದರೆ ಅದರ ಸಾಂದ್ರತೆ ಮತ್ತು ಗುರುತ್ವಾಕರ್ಷಣೆ ಅಷ್ಟು ಪ್ರಬಲವಾಗಿದೆ. ಭಾರತದಲ್ಲಿ ಸಮಕಾಲೀನ ಕಲೆಯ ಮೂಲಸೌಕರ್ಯ ಈಗ ಇರುವ ಸ್ಥಿತಿಯಲ್ಲಿ ಯಾಕಿದೆ ಎನ್ನುವುದಕ್ಕೆ ಇದೇ ಕಾರಣವಾಗಿದೆ. ಇದಕ್ಕೆ ನಿರ್ಲಕ್ಷ ಅಥವಾ ನಿಧಿಯ ಕೊರತೆ ಕಾರಣವಲ್ಲ. ಸಮಕಾಲೀನ ಭಾರತದ ಸಾಂಸ್ಕೃತಿಕ ವಿಶ್ವದಲ್ಲಿ ನೆಲೆಸಿರುವ ಕಪ್ಪು ಕುಳಿಗಳೇ ಇದಕ್ಕೆ ಕಾರಣ. ಅದನ್ನು ನಾವು ಎದುರಿಸೋಣ.

ಆಗಿ ಹೋದ ವ್ಯಕ್ತಿಗಳ ಪ್ರತಿಮೆಗಳ ಗಾತ್ರದ ಬಗ್ಗೆ ಈ ಸರಕಾರ ಹೊಂದಿರುವ ಅಸಾಧ್ಯ ಮೋಹವನ್ನು ಸ್ಪಷ್ಟವಾಗಿ ಬಿಂಬಿಸಬೇಕಾದರೆ ಭವಿಷ್ಯದ ಕಲಾ ಇತಿಹಾಸಕಾರರು ‘ಮೋದಿ-ಬೃಹತ್-ದಿಟ್ಟ-ಚಿರಸ್ಥಾಯಿ’ ಮುಂತಾದ ಪದಗಳನ್ನು ಬಳಸಬೇಕಾಗುತ್ತದೆ ಎಂದು ನನಗನಿಸುತ್ತದೆ.

ಕೃಪೆ : thewire

share
ಶುದ್ಧಬ್ರತ ಸೇನ್‌ಗುಪ್ತ
ಶುದ್ಧಬ್ರತ ಸೇನ್‌ಗುಪ್ತ
Next Story
X