ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ ಎಂದ ಎಂ.ಪಿ ರೇಣುಕಾಚಾರ್ಯ
ಅತ್ಯಾಚಾರಗಳು ಜಾಸ್ತಿಯಾಗುವುದಕ್ಕೆ ಇದೇ ಕಾರಣ ಎಂದ ಶಾಸಕ

ಹೊಸದಿಲ್ಲಿ: ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ. ಇಂದು ಅತ್ಯಾಚಾರಗಳು ಜಾಸ್ತಿಯಾಗುವುದಕ್ಕೆ ಇದೇ ಕಾರಣ ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರ ಟ್ವಿಟ್ ಕುರಿತು ಪ್ರತಿಕ್ರಿಯಿಸಿರುವ ರೇಣುಕಾಚಾರ್ಯ, ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ. ಮಹಿಳೆಯರು ಬಟ್ಟೆಯಿಂದ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಏನನ್ನು ಧರಿಸಬೇಕೆಂದು ನಿರ್ಧರಿಸುವ ಹಕ್ಕು ಮಹಿಳೆಯರಿಗಿದೆ, ಕಿರುಕುಳ ನಿಲ್ಲಿಸಿ: ಹಿಜಾಬ್ ವಿವಾದದ ಕುರಿತು ಪ್ರಿಯಾಂಕ
"ಅದು ಬಿಕಿನಿಯಾಗಿರಬಹುದು, ಗೂಂಘಟ್ ಆಗಿರಬಹುದು, ಜೀನ್ಸ್ ಆಗಿರಬಹುದು ಅಥವಾ 'ಹಿಜಾಬ್' ಆಗಿರಬಹುದು, ಏನನ್ನು ಧರಿಸಬೇಕೆಂದು ನಿರ್ಧರಿಸುವ ಹಕ್ಕು ಮಹಿಳೆಯರಿಗಿದೆ,'' ಎಂದು ಪ್ರಿಯಾಂಕ ಗಾಂಧಿ ವಾದ್ರಾ ಅವರು ಕರ್ನಾಟಕದ ಕಾಲೇಜುಗಳಲ್ಲಿ ಎದ್ದಿರುವ ಹಿಜಾಬ್ ವಿವಾದದ ಕುರಿತು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದರು.
Next Story





