ಎಂ.ಫ್ರೆಂಡ್ಸ್ ನಿಂದ ವೆನ್ಲಾಕ್ ಆಸ್ಪತ್ರೆಗೆ ಗಾಲಿಕುರ್ಚಿಗಳ ಕೊಡುಗೆ
ಮಂಗಳೂರು, ಫೆ.9: ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಕಳೆದ 4 ವರ್ಷಗಳಿಂದ ಅನ್ನದಾನದ ಜೊತೆಗೆ ರೋಗಿಗಳ ಕೆಲವೊಂದು ಖಾಸಗಿ ಸಮಸ್ಯೆಗಳಿಗೂ ಸ್ಪಂದಿಸಿ ನೆರವು ನೀಡುತ್ತಿರುವ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಆಸ್ಪತ್ರೆಯ ಸರಕಾರಿ ಸೇವೆಯ ಜೊತೆಗೆ ಕೈಜೋಡಿಸುತ್ತಿರುವುದು ಶ್ಲಾಘನೀಯ. ಪ್ರಸಕ್ತ ತುರ್ತು ಬೇಡಿಕೆಯಾಗಿದ್ದ ಗಾಲಿಕುರ್ಚಿಯನ್ನು ಪ್ರಾಯೋಜಿಸಿದೆ ಎಂದು ವೆನ್ಲಾಕ್ ಜಿಲ್ಲಾಸ್ಪತ್ರೆಯ ಆರ್.ಎಂ.ಓ. ಡಾ.ಸುಧಾಕರ್ ಟಿ. ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರಕಾರಿ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಕೊಡುಗೆಯಾಗಿ ನೀಡಿದ ಗಾಲಿಕುರ್ಚಿಗಳನ್ನು ಬುಧವಾರ ಆಸ್ಪತ್ರೆ ವಠಾರದಲ್ಲಿ ಹಸ್ತಾಂತರಿಸಲಾಯಿತು.
ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಸೇವೆಗೆ ಅವಕಾಶ ಮಾಡಿಕೊಟ್ಟ ಆಸ್ಪತ್ರೆ ಅಧಿಕಾರಿಗಳು ಕೃತಜ್ಞರು ಎಂದು ಹೇಳಿದರು.
ಈ ಸಂದರ್ಭ ಎಂ.ಫ್ರೆಂಡ್ಸ್ ಸದಸ್ಯರಾದ ಹಮೀದ್ ಅತ್ತೂರು, ಅಡ್ವಕೇಟ್ ಶೇಖ್ ಇಸಾಕ್, ಅಶ್ಫಾಕ್, ವೆನ್ಲಾಕ್ ಆಸ್ಪತ್ರೆಯ ಸುಕೇಶ್, ಭವಾನಿ, ಮೇರಿ ಉಪಸ್ಥಿತರಿದ್ದರು.