ವಿಟ್ಲ: ಮನೆಗೆ ನುಗ್ಗಿ ಮಹಿಳೆಗೆ ಕತ್ತಿಯಿಂದ ಕಡಿದು ಚಿನ್ನಾಭರಣ ದರೋಡೆ
ಕರೆಂಟ್ ಬಿಲ್ ಕೇಳುವ ನೆಪದಲ್ಲಿ ದುಷ್ಕರ್ಮಿಗಳಿಂದ ದಾಳಿ

ಬಂಟ್ವಾಳ : ಒಂಟಿ ಮಹಿಳೆ ಇದ್ದ ಮನೆಗೆ ನುಗ್ಗಿದ ದರೋಡೆಕೋರರು ಮಹಿಳೆಗೆ ಕತ್ತಿಯಿಂದ ಕಡಿದು ಚಿನ್ನಾಭರಣ ದೋಚಿದ ಘಟನೆ ವಿಟ್ಲದ ಅಡ್ಡದ ಬೀದಿಯಲ್ಲಿ ನಡೆದಿದೆ.
ಸುಲೈಮಾನ್ ಅವರ ಪತ್ನಿ ಭೀಪಾತುಮ್ಮ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅವರ ಪತಿ ಸುಲೈಮಾನ್ ಅಡ್ಡದ ಬೀದಿಯಲ್ಲಿ ಎಳನೀರು ವ್ಯಾಪಾರ ಮಾಡುತ್ತಿದ್ದು ಮಧ್ಯಾಹ್ನ ಮನೆಗೆ ಬಂದು ಹಿಂತಿರುಗಿದ್ದರು. ಮಹಿಳೆ ಮನೆಯಲ್ಲಿ ಒಬ್ಬರೇ ಇದ್ದರು. ಈ ಸಂದರ್ಭ ಇಬ್ಬರು ದುಷ್ಕರ್ಮಿಗಳು ಕರೆಂಟ್ ಬಿಲ್ ಕೊಡುವ ನೆಪದಲ್ಲಿ ಮನೆಯ ಒಳಗೆ ಬಂದು ಕತ್ತಿಯಿಂದ ಕಡಿದು ಹಲ್ಲೆ ನಡೆಸಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ.
Next Story