ದ.ಕ.ಜಿಲ್ಲೆ: ಕೋವಿಡ್ಗೆ 5 ಮಂದಿ ಬಲಿ; 103 ಮಂದಿಗೆ ಕೊರೋನ ಸೋಂಕು

ಮಂಗಳೂರು, ಫೆ.9: ದ.ಕ.ಜಿಲ್ಲೆಯಲ್ಲಿ ಬುಧವಾರ ಕೋವಿಡ್ಗೆ 5 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಈವರೆಗೆ ಕೋವಿಡ್ಗೆ ಬಲಿಯಾದವರ ಸಂಖ್ಯೆ 1,810ಕ್ಕೇರಿದೆ.
ಬುಧವಾರ 103 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅಲ್ಲದೆ 267 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 1,34,661 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಸೋಂಕಿತರ ಪೈಕಿ ಒಟ್ಟು 1,31,513 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಸದ್ಯ 1,338 ಸಕ್ರಿಯ ಪ್ರಕರಣವಿದೆ.
*ಬುಧವಾರ ಮೃತಪಟ್ಟ 5 ಮಂದಿಯ ಪೈಕಿ ಮಂಗಳೂರು ಮತ್ತು ಬಂಟ್ವಾಲ ತಾಲೂಕಿನ ತಲಾ ಒಬ್ಬರು ಹಾಗೂ ಹೊರ ಜಿಲ್ಲೆಯ ಮೂವರು ಸೇರಿದ್ದಾರೆ. ಆ ಪೈಕಿ ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story