ಬಂಟ್ವಾಳ: ಟಿಕ್ ಟಾಕ್ ಅಜ್ಜಿ ಎಂದೇ ಪ್ರಖ್ಯಾತರಾಗಿದ್ದ ಕಮಲ ಅಜ್ಜಿ ನಿಧನ

ಬಂಟ್ವಾಳ, ಫೆ.9: ಟಿಕ್ ಟಾಕ್ ಅಜ್ಜಿ ಎಂದೇ ಪ್ರಖ್ಯಾತರಾಗಿದ್ದ 86 ವರ್ಷ ವಯಸ್ಸಿನ ಕಮಲ ಅವರು ಬುಧವಾರ ಸಂಜೆ ನಿಧನರಾದರು.
ಈ ಬಗ್ಗೆ ಧನರಾಜ್ ಆಚಾರ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸಂಜೆ 4:30ರ ಸುಮಾರಿಗೆ ಕಮಲ ಅವರು ನಿಧನರಾಗಿದ್ದು ನಾಳೆ ಬೆಳಗ್ಗೆ ಧನರಾಜ್ ಅವರ ಅನಂತಾಡಿಯ ಮನೆಯಲ್ಲಿ ಕಮಲಜ್ಜಿಯ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಅಜ್ಜಿಯ ನಿಧನದ ಬಗ್ಗೆ ಕಂಬನಿ ಮಿಡಿದಿರುವ ಅವರು, ಟಿಕ್ ಟಾಕ್ ಅಜ್ಹಿಯೆಂದೇ ಪ್ರೀತಿ ತೋರಿಸಿದ್ದೀರಿ. ಅಜ್ಜಿಯ ಆ ಮುಗ್ಧತೆ ಪ್ರತಿಯೊಂದು ವೀಡಿಯೋದಲ್ಲೂ ಎಷ್ಟೋ ಜನರಿಗೆ ಅವರ ಅಜ್ಜಿಯನ್ನು ನೆನಪು ಮಾಡಿಸಿದ್ದು ಇದೆ. ಆದರೆ ಈಗ ನಮ್ಮ ಫ್ಯಾಮಿಲಿಯ ಒಗ್ಗಟ್ಟಿಗೆ ಕಾರಣರಾಗಿದ್ದ ಮಗು ಮನಸಿನ ಅಜ್ಜಿ ನಮ್ಮನ್ನೆಲ್ಲ ಬಿಟ್ಟು ಇಂದು ಸಂಜೆ 4:30ಕ್ಕೆ ನೆನಪುಗಳೊಂದಿಗೆ ಅಗಲಿದ್ದಾರೆ. 86ರ ವಯಸ್ಸಿನ ಕಮಲಜ್ಜಿಗೆ ಭಾವಪೂರ್ಣ ವಿದಾಯ ನಾಳೆ ಬೆಳಗ್ಗೆ ನಮ್ಮ ಮನೆ ಅನಂತಾಡಿಯಲ್ಲಿ ಅಜ್ಜಿಯ ಅಂತಿಮ ದರ್ಶನ ಎಂದು ತಿಳಿಸಿದ್ದಾರೆ.
ಅಜ್ಜಿ ಇನ್ನು ನೆನಪು ಮಾತ್ರ. ಅಜ್ಜಿ ಜೊತೆ ವೀಡಿಯೋ ಮಾಡು ಅನ್ನೋ ನಿಮ್ಮೆಲ್ಲರ ಬೇಡಿಕೆಯನ್ನೂ ಕೇಳದೆ ಹೊರಟು ಹೋದ್ರು ಎಂದು ಧನ್ ರಾಜ್ ನೋವು ತೋಡಿಕೊಂಡಿದ್ದಾರೆ.