ಫೆ. 20ರಂದು ಕೆಸಿಎಫ್ ಯುಎಇ ಪ್ರತಿಭೋತ್ಸವ, ಕೆಸಿಎಫ್ ಡೇ

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ - ಕೆಸಿಎಫ್ ಯುಎಇ ಸಮಿತಿ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ನಾಲ್ಕನೇ ಆವೃತ್ತಿಯ ಪ್ರತಿಭೋತ್ಸವವು ಫೆ. 20ರಂದು ದುಬೈ ಇಂಡಿಯನ್ ಅಕಾಡಮಿ ಸ್ಕೂಲ್ ಕಿಸೈಸ್ ನಲ್ಲಿ ನಡೆಯಲಿದೆ.
ಯುಎಇ ಯಾದ್ಯಂತ ಏಳು ಎಮಿರೇಟ್ಸ್ ಗಳ (ಅಬೂಧಾಬಿ, ದುಬೈ ನಾರ್ತ್, ದುಬೈ ಸೌತ್, ಶಾರ್ಜಾ, ಅಜ್ಮಾನ್, ಅಲ್ ಐನ್, ರಾಸಲ್ ಕೈಮಾ ಝೋನ್ ಮಟ್ಟಗಳಲ್ಲಿ ನಡೆದ ಪ್ರತಿಭೋತ್ಸವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅರ್ಹ ಪ್ರತಿಭೆಗಳು ನ್ಯಾಷನಲ್ ಮಟ್ಟದ ಪ್ರತಿಭೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಪ್ರತಿಭೋತ್ಸವ ಯಶಸ್ವಿಯಾಗಿ ಸ್ವಾಗತ ಸಮಿತಿ
ನಿರ್ದೇಶಕ ಮಂಡಳಿ ಅಧ್ಯಕ್ಷರಾಗಿ ಅಬೂಸ್ವಾಲಿಹ್ ಹಾಜಿ (ನಫೀಸಾ ಗ್ರೂಪ್), ಕಾರ್ಯದರ್ಶಿಯಾಗಿ ಅಬ್ದುಲ್ ಸಮದ್ ಶಾರ್ಜಾ, ಸದಸ್ಯರುಗಳಾಗಿ ಅಬ್ದುಲ್ ಹಮೀದ್ ಸಅದಿ, ಜಲೀಲ್ ನಿಝಾಮಿ, ಉಸ್ಮಾನ್ ಹಾಜಿ ನಾಪೋಕ್ಲು, ಅಬ್ದುಲ್ಲಾ ಹಾಜಿ ನಲ್ಕ, ಪಿಎಂಎಚ್ ಈಶ್ವರಮಂಗಿಲ, ಇಬ್ರಾಹಿಂ ಹಾಜಿ ಬ್ರೈಟ್ ಅವರನ್ನು ಆಯ್ಕೆ ಮಾಡಲಾಗಿದೆ.
ಸಯ್ಯದ್ ಮಕ್ದೂಂ (ಛೇರ್ಮನ್), ಲತೀಫ್ ತಿಂಗಳಾಡಿ (ಕನ್ವೀನರ್), ಖಾದರ್ ಸಾಲೆತ್ತೂರು (ಕೋಶಾಧಿಕಾರಿ) ನೇತೃತ್ವದಲ್ಲಿ ಸ್ವಾಗತ ಸಮಿತಿ ರಚಿಸಲಾಗಿದೆ. ಯುವ ಕಾರ್ಯಕರ್ತರನ್ನೊಳಗೊಂಡ ವಿವಿಧ ಉಪಸಮಿತಿಯನ್ನು ರಚಿಸಲಾಯಿತು.
ಕಿಡ್ಸ್, ಜೂನಿಯರ್, ಸಬ್ ಜೂನಿಯರ್, ಸೀನಿಯರ್, ಗರ್ಲ್ಸ್, ಲೇಡೀಸ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ಕಿರಾ-ಅತ್, ಕನ್ನಡ, ಅರೇಬಿಕ್, ಮಲಯಾಳಂ ಹಾಡುಗಳು, ಕನ್ನಡ, ಅರೇಬಿಕ್, ಮಲಯಾಳಂ, ಇಂಗ್ಲಿಷ್, ಭಾಷಣ, ಪ್ರಬಂಧ, ಮೆಮೊರಿ ಟೆಸ್ಟ್, ರಸಪ್ರಶ್ನೆ, ಕೈಬರಹ,ದಫ್ಫ್ ಸ್ಪರ್ಧೆ, ಬುರ್ದಾ, ಕವಾಲಿ, ಚಿತ್ರಕಲೆ, ಅಡುಗೆ ಪಾಕ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಅತ್ಯಾಕರ್ಷಕ ಶೈಲಿಯಲ್ಲಿ ನಡೆಯಲಿದೆ. ಈಗಾಗಲೇ ವಿವಿಧ ಎಮಿರೇಟ್ಸ್ ಗಳಿಂದ ಹಲವಾರು ಕನ್ನಡಿಗ ಕುಟುಂಬಗಳು ನೋಂದಣಿ ಮಾಡಿಕೊಂಡಿದ್ದು ಕಾರ್ಯಕ್ರಮದ ಸಿದ್ದತೆಗಳು ಅಂತಿಮ ಹಂತದಲ್ಲಿದೆ ಎಂದು ಪ್ರಕಟನೆ ತಿಳಿಸಿದೆ.







